ಬಂಡೂಲ ಎರಡನೆಯ ಮಹಾಯುದ್ದದಲ್ಲಿ ಆನೆಗಳ ಸಹಾಯದಿಂದ ಹಲವಾರು ಜೀವಗಳನ್ನುಳಿಸಲು ನೆರವಾದ ಯುದ್ಧವೀರ ಜೇಮ್ ಹೂವಾರ್ಡ್ ವಿಲಿಯಮ್ ನ ಸ್ಫೂರ್ತಿದಾಯಕ ಕಥೆಯಾಗಿದೆ. ಇದನ್ನು ಕನ್ನಡಕ್ಕೆ ರಾಜ್ಯಶ್ರೀ ಕುಳವರ್ಮ ತಂದಿದ್ದಾರೆ.
1920 ರಲ್ಲಿ ಬರ್ಮಾದ ತೇಗದ ಮರದ ಉದ್ಯಮದಲ್ಲಿ ಕೆಲಸ ಮಾಡಲು ಹೋದ ವಿಲಿಯಮ್ ಕ್ರಮೇಣ ಮರದ ದಿಮ್ಮಿಗಳನ್ನು ನದಿ ಮಾರ್ಗಕ್ಕೆ ಹಾಕುವ ಆನೆಗಳ ಒಡನಾಟ ಬೆಳೆಸಿಕೊಂಡ. ಆನೆಗಳ ಮನಸ್ಸು-ಹೃದಯವನ್ನು ಅರಿಯುವ ಮೂಲಕ ತನ್ನದೇ ಆದ ಆನೆಗಳ ತಂಡವೊಂದನ್ನು ಕಟ್ಟಿದ. ಈ ಅನೆಗಳ ಸಹಕಾರದಿಂದ ಎರಡನೇ ಮಹಾಯುದ್ದದಲ್ಲಿ ಬರ್ಮಾದಿಂದ ಜಪಾನೀಯರನ್ನು ಹಿಮ್ಮೆಟ್ಟಿಸಿದ ಘಟನೆಯು ಪ್ರಸಿದ್ದವಾಗಿದೆ.
ನಿರಾಶ್ರಿತರ ಜೀವವುಳಿಸಿದ ಗಜಪಡೆಯು ಬರ್ಮಾದ ಸೈನಿಕರಿಗೆ ನೆರವಾದವು. ಈ ಆನೆಗಳ ಮೂಲಕ ಬೇಕಾದಲ್ಲಿ ಸೇತುವೆ ನಿರ್ಮಿಸಿ ಸೈನಿಕರಿಗೆ ಓಡಾಟದ ಹಾದಿಯನ್ನು ಸುಗಮಗೊಳಿಸಲಾಯಿತು. ಆನೆಗಳೊಂದಿಗೆ ಬದುಕುತ್ತಿದ್ದ ವಿಲಿಯಮ್ಸ್ನ ಆನೆಗಳ ಗುರು ಬಂಡೂಲ. ಈ ಕೃತಿಯು ವಿಲಿಯಮ್ಸ್ನ ಗಜಪಡೆಯ ಸಹಾಸಮಯ ಕಥೆಗಳನ್ನು ಒಳಗೊಂಡಿದೆ.
©2024 Book Brahma Private Limited.