ಲೇಖಕಿ ಎಸ್.ವಿ ಪ್ರಭಾವತಿ ಅವರ ಕಾದಂಬರಿ ‘ಪಾವನಗಂಗೆಯರು ಸಂಪುಟ -3’ " ಅನುದಿನ(ದ) ಅಂತರಗಂಗೆ " ಎಂಬ ಹೆಸರಿನ ಎರಡು ಸಂಪುಟಗಳಲ್ಲಿ ಪ್ರಕಟವಾದ ಈ ಎಂಟು ಕಾದಂಬರಿಗಳ ಪ್ರತಿಗಳು ಲಭ್ಯವಿಲ್ಲವಾಗಿ ಅದೇ ಪ್ರಕಾಶಕರಿಂದ ನಾಲ್ಕು ಸಂಪುಟಗಳಲ್ಲಿ " ಪಾವನ ಗಂಗೆಯರು " ಎಂಬ ಹೆಸರಿನಿಂದ ಪ್ರಕಟವಾಗಿದೆ. ಇದರ 3ನೇ ಸಂಪುಟ ಪಾವನಗಂಗೆಯರು ಸಂಪುಟ -3 (ಗಾರ್ಗಿ -ಯಶೋಧರೆ).
ಲೇಖಕಿಯ ಮಾತಿನಲ್ಲಿ, ’ಶಾಕುಂತಲ ಬರೆಯುವ ವೇಳೆಗೆ ಕಾಲಘಟ್ಟದ ಬಗ್ಗೆ ಭ್ರಮನಿರಸನವಾಗಿತ್ತು. ಮಹಾಭಾರತ ದ ಶಾಕುಂತಲೋಪಾಖ್ಯಾನ ಓದಿದ್ದೆ. ಕಾಳಿದಾಸನ ಪಾಠ ಮಾಡಿ ನುರಿತಿದ್ದೆ . ದುಷ್ಯಂತನನ್ನು ನಿರಪರಾಧಿಯಾಗಿಸಲು ಅವನು ಹೆಣೆದ ಮೋಹಕ ಹೆಣಿಗೆ ಯೇ ‘ ಉಂಗುರ’ ಮತ್ತು ‘ಶಾಪ’ . ಇವೆರಡೂ ಮೂಲ ಕತೆ ಯಲ್ಲಿ ಇಲ್ಲ. ನಾನು ಮೂಲ ಕತೆ ಯನ್ನು ಆಧರಿಸಿ ಬರೆದೆ . ಏಕೆಂದರೆ ಸ್ತ್ರೀ ವಾದಿಗಳು ದುಷ್ಯಂತನನ್ನು ಕ್ಷಮಿಸುವುದಿಲ್ಲ.ಮಾಸ್ತಿ ,ಎಂ ಎಸ್ ವೇದಾ ಇವರ ಕತೆ ಗೂ ನನ್ನ ಕತೆಗೂ ಇರುವ ಹೋಲಿಕೆ ಕಂಡು ಆಶ್ಚರ್ಯ ವಾಯಿತು . ಒಂದೇ ಸಮನೆ ವರ್ಷಕ್ಕೊಂದರಂತೆ ಬಂದ ಕಾದಂಬರಿ ಸರಣಿಗೆ ಬ್ರೇಕ್ ಬಿತ್ತು . ನಿಮ್ಮ ಬರವಣಿಗೆಯ ರೀತಿಗೆ ‘ಗಾರ್ಗಿ ಯ ಕತೆ ಹೊಂದುತ್ತದೆ ಎಂಬ ಮಲ್ಲೇಪುರಂ ಅವರ ಮಾತಿನಿಂದ ಯಜುರ್ವೇದ , ಬೃಹದಾರಣ್ಯಕ ತೈತ್ತಿರೀಯ ಮೊದಲಾದ ಉಪನಿಷತ್ತು ಗಳು , ದೇವುಡು ಅವರ ಮಹಾದರ್ಶನ .... ಇವಿಷ್ಟನ್ನು ಓದಿ ಕರಗತ ಮಾಡಿಕೊಂಡು ಗಾರ್ಗಿ ಬರೆಯುವ ವೇಳೆಗೆ ಐದು ವರ್ಷಗಳಾಗಿತ್ತು. ಆಗ ಮತ್ತೆ ಪ್ರಾರಂಭವಾಗಿದ್ಧ ಪ್ರಜಾಮತ ದಲ್ಲಿ ಧಾರಾವಾಹಿ ಯಾಗಲೆಂದು ಕೊಟ್ಟು , ಪ್ರಜಾಮತ ನಿಂತುಹೋಯಿತು. ಜೆರಾಕ್ಸ್ ಮಾಡಿಸಿರಲಿಲ್ಲವಾಗಿ ಗಾರ್ಗಿ ಕಳೆದುಹೋದಳು . ಹಸ್ತಪ್ರತಿ ಸಿಕ್ಕಿ ಮತ್ತೆ ಪ್ರಕಟವಾಗಿದ್ದು ನನ್ನ ಅದೃಷ್ಟ . ಕಮಲಾ ಹೆಮ್ಮಿಗೆ ಅವರು ಸಂಕ್ರಮಣ ಕ್ಕೆ ಬರೆದ ಇದರ ವಿಮರ್ಶೆ ಇನ್ನೊಂದು ಅದೃಷ್ಟ ಎಂಬುದಾಗಿ ಹೇಳಿದ್ದಾರೆ.
©2024 Book Brahma Private Limited.