" ಅನುದಿನ( ದ) ಅಂತರಗಂಗೆ " ಎಂಬ ಹೆಸರಿನ ಎರಡು ಸಂಪುಟಗಳಲ್ಲಿ ಪ್ರಕಟವಾದ ಈ ಎಂಟು ಕಾದಂಬರಿಗಳ ಪ್ರತಿಗಳು ಲಭ್ಯವಿಲ್ಲವಾಗಿ ಅದೇ ಪ್ರಕಾಶಕರಿಂದ ನಾಲ್ಕು ಸಂಪುಟಗಳಲ್ಲಿ " ಪಾವನ ಗಂಗೆಯರು " ಎಂಬ ಹೆಸರಿನಿಂದ ಪ್ರಕಟವಾಗಿದೆ. ಇದರ 2ನೇ ಸಂಪುಟ ಪಾವನಗಂಗೆಯರು ಸಂಪುಟ -2 (ಸೀತೆ-ಅಹಲ್ಯಾ).
ಲೇಖಕಿಯ ಮಾತಿನಲ್ಲಿ, ’ಅಹಲ್ಯಾ ಬರುವುದು ರಾಮಾಯಣ ದಲ್ಲಿ . ಅದೂ ಉಪಕಥೆ ಯಾಗಿ . ಕೇವಲ 38 ಶ್ಲೋಕಗಳಲ್ಲಿ ಬರುವ ಕತೆಗೆ ಪುರಾಣ ನಾಮ ಚೂಡಾಮಣಿಯ ವಿವರಗಳನ್ನು ಬೆರೆಸಿದರೂ ಮೂಲವಸ್ತು ಅತ್ಯಲ್ಪ . ಹೀಗಾಗಿ ನನ್ನ ಕಲ್ಪನೆಯನ್ನೇ ಆಶ್ರಯಿಸಿ ಅಹಲ್ಯಾ ಇಂದ್ರನನ್ನು ಬಯಸಿದ್ದನ್ನು ಯುಕ್ತಿ ಯುಕ್ತ ವಾಗಿ ಸಮರ್ಥಿಸಿ ಅವಳನ್ನು ಕಲ್ಲಾಗಿಸದೇ , ಗೌತಮನ ಸಾಧನೆಯನ್ನು ಅಲ್ಲಗಳೆಯದೇ ರಾಮನನ್ನು ಮಾನವೀಯವಾಗಿಸಿದ್ದು ನನಗೆ ಅತ್ಯಂತ ಪ್ರೀತಿಯ ವಿಷಯವಾಗಿತ್ತು . ಈ ಚಿಕ್ಕ ಕಾದಂಬರಿ ನನ್ನ ಮಹತ್ವಾಕಾಂಕ್ಷೆಯದಾಗಿತ್ತು .ಮಲ್ಲಿಕಾ ಘಂಟಿಯವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದರು. ಈ ಪುಸ್ತಕವನ್ನೋದಿದ ನನ್ನ ವಿದ್ಯಾರ್ಥಿನಿಯರೂ ರಾಮನ ಮಾತೆಲ್ಲ ನಿಮ್ಮದೇ ಎಂದರು . ಅಷ್ಟು ದಟ್ಟವಾಗಿ ಅಲ್ಲಿ ಸ್ತ್ರೀ ಸಂವೇದನೆ ಪ್ರತಿಪಾದಿತವಾಗಿತ್ತು . ಅಹಲ್ಯೆಯನ್ನು ಒಂಟಿಯಾಗಿ ನಿಲ್ಲಿಸಬೇಕಿತ್ತು ಎಂದರು ಕೆಲ ಉಗ್ರ ಸ್ತ್ರೀ ವಾದಿಗಳು . ಸ್ತ್ರೀ ವಾದವು ಆಧುನಿಕ ಪರಿವೇಷಗಳನ್ನು ಕಳಚಿ ಕೊಂಡು ಮಾಗುತ್ತಿರುವ ಈ ದಿನಗಳಲ್ಲಿ ಅಂತಹ ಅತಿರೇಕದ ಅವಶ್ಯಕತೆ ನನಗೆ ಕಾಣಲಿಲ್ಲ. ಅದು ನನ್ನ ಉದ್ದೇಶವೂ ಆಗಿರಲಿಲ್ಲ . ಆದರೆ ಭಗವಾನ್ ಬುದ್ಧ ನ ಹೆಂಡತಿ ಯಶೋಧರೆಯನ್ನು ಕೇಂದ್ರವಾಗಿಟ್ಟುಕೊಂಡು ಬರೆಯುವ ವೇಳೆಗೆ ಇಡೀ ಆ ಕಾಲ ಘಟ್ಟದ ಚಿತ್ರಣವಾದರೆ ಕೃತಿಗೆ ಇನ್ನೂ ತೂಕ ಎಂಬ ಕೆಲವು ಹಿತೈಷಿಗಳ ಮಾತು ಕೇಳಿ ಈ ಕಾದಂಬರಿ ಯ ಪ್ರಾರಂಭದಲ್ಲಿ ವೇದನಿಂದೆ ಏಕೆ ಪ್ರಾರಂಭವಾಯಿತು ಎಂಬ ಪ್ರಶ್ನೆಯ ಹಿನ್ನೆಲೆಯಲ್ಲಿ ಬೌದ್ಧ ಧರ್ಮದ ಅಗತ್ಯವನ್ನು ಪ್ರತಿಪಾದಿಸಬಹುದೆನ್ನಿಸಿತು . ಅದಕ್ಕೆ ಸಂಬಂಧಿಸಿದ ಪುಟಗಳು ಸೂಕ್ಷ್ಮವಾಗಿವೆ , ಸೂಚ್ಯವಾಗಿವೆ , ಪ್ರಾಜ್ಙರಿಗೆ ಅರ್ಥವಾಗುತ್ತದೆ . ಅದು " ಸರಿ " ಯಾಗಿದೆಯೇ ಎಂಬ ಕಾಳಜಿ ನನಗೆ ಮುಖ್ಯವಲ್ಲ. ಗೌತಮ ಬುದ್ಧನ ಸಾಧನೆಯನ್ನು ನಗಣ್ಯ ವಾಗಿಸದೇ ಯಶೋಧರೆಯ ಅಳಲನ್ನು ಚಿತ್ರಿಸಿರುವುದು , ಶುದ್ಧೋಧನನ ಪಾತ್ರಕ್ಕೆ ಮಹತ್ವ ವಿತ್ತಿರುವುದು ಇವು ಗಳನ್ನು ಪ್ರಸಂಶಿಸಿದ ವಿಮರ್ಶಾತ್ಮಕ ಇದರ ಕೆಲವು ಘಟನೆಗಳು ಇತಿಹಾಸ ದಿಂದ ದೂರವಾಗಿವೆ ಅಥವಾ ಇತಿಹಾಸದಲ್ಲಿ ಇಲ್ಲ ಎಂಬರ್ಥದ ವಿಮರ್ಶೆ ಬರೆದರು . ಹಾಗೆ ನೋಡಿದರೆ ಸಿದ್ಧಾರ್ಥನಿಗೆ ಯಶೋಧರೆಯಲ್ಲದೆ ಇನ್ನೂ ಹಲವು ಹೆಂಡಿರಿದ್ದರು ಎಂಬ ಚರಿತ್ರೆ ಯ ಅಂಶವನ್ನೇ ನಾನು ಕೈ ಬಿಟ್ಟಿರುವೆ . ಹಾಗಾಗಿ ಒಂದು ಕಾದಂಬರಿ ಯಾಗಿ ಇದು ಚರಿತ್ರೆ ಯನ್ನು ಅಷ್ಟೊಂದು ಪಾಲಿಸಬೇಕಿಲ್ಲ ಎಂಬುದು ನನ್ನ ನಂಬಿಕೆ.
ಸೀತಾ , ಶಾಕುಂತಲಾ ಬರೆಯುವ ವೇಳೆಗೆ ಉದ್ಯೋಗ ಪರ್ವ ಮತ್ತು ಸಾಂಸಾರಿಕ ಪರ್ವಗಳೆರಡೂ ಅನಿರೀಕ್ಷಿತ ತಿರುವು ತೆಗೆದು ಕೊಂಡು ಬದುಕನ್ನು ಅಸಹನೀಯವಾಗಿಸಿದ್ದವು . ಅದರ ಛಾಯೆ ಈ ಎರಡರ ಮೇಲೆ ಆಗಿದ್ದರೂ ಗುಣಮಟ್ಟವನ್ನು ಕಾಯ್ದುಕೊಂಡಿರುವೆ . ಆ ಕಾಲಘಟ್ಟದ ಚಿತ್ರಣ ಎಂಬ ಉದ್ದೇಶದಿಂದ * ಸೀತಾ * ಕಾದಂಬರಿಗೆ ಹಿನ್ನೆಲೆಯಾಗಿ ವಾಲ್ಮೀಕಿ ಎಂಬ ಪರಂಪರೆಯೊಂದಿಗೆ ರಾಮಾಯಣ ಕತೆ ಯ ವೈದಿಕ ರೂಪವನ್ನು ರಚನೆಗಿಳಿಸುವ ಕಾಲದ ಜೈನ ಬೌದ್ಧ ಜಾನಪದ ಕತೆಗಳ ಎಳೆಗಳನ್ನು ಸೂಚ್ಯವಾಗಿ ವಿಶ್ಲೇಷಣೆ ಮಾಡಿ ಬರೆದೆ . ಸೀತೆಯ ಪಾತ್ರ ದ ಅನಿಸಿಕೆ ವಾಲ್ಮೀಕಿ ಯಲ್ಲಿ ಅತ್ಯಲ್ಪ . ಅದನ್ನು ಈಗಾಗಲೇ ತೆಲುಗು ಪ್ರತಿಭಟನಾ ಸಾಹಿತ್ಯ ವು ಪ್ರಶ್ನಿಸಿಬಿಟ್ಟಿದೆ - ಪೋಲಂಕಿ ರಾಮಮೂರ್ತಿ , ಮುಪ್ಪಾಳು ರಂಗನಾಯಕಮ್ಮ , ಆರುದ್ರ - ಒಬ್ಬ ವಿಮರ್ಶಕರು ಗುರುತಿಸಿರುವಂತೆ ಸೀತೆಯ ಪಾತ್ರ ಸ್ಪೋಟಗೊಳ್ಳುವುದಿಲ್ಲ ಎಂಬುದು ಆಶ್ಚರ್ಯ ದ ಸಂಗತಿ ಯಾದರೂ ಸತ್ಯ .
©2024 Book Brahma Private Limited.