ಲೇಖಕ ಡಾ. ಸುರೇಶ ಎಲ್. ಜಾಧವ ಅವರು ,ಮೂಲತಃ ಕಲಬುರಗಿಯವರು. ಇಲ್ಲಿಯ ನೂತನ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ, ಗುಲಬಗಾ ವಿ.ವಿ.ಯಿಂದ ಎಂ.ಎ ಪದವೀಧರರು. ನಯಸೇನನ ಧರ್ಮಾಮೃತದ ಭಾಷಿಕ ಅಧ್ಯಯನ ಕುರಿತು ಸಲ್ಲಿಸಿದ ಪ್ರಬಂಧಕ್ಕೆ ಎಂ.ಫಿಲ್ ಹಾಗೂ ಹರಿದಾಸರ ಕೀರ್ತನೆಗಳ ಸಾಂಸ್ಕೃತಿಕ ಅಧ್ಯಯನ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿ ಪಡೆದಿದ್ದಾರೆ. ಸದ್ಯ, ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ಸಂಸ್ಕೃತಿ, ಸಾಹಿತ್ಯ, ವಿಮರ್ಶೆ, ಸಂಶೋಧನೆ ವಿಷಯದಲ್ಲಿ ಆಸಕ್ತಿ. ಯುಜಿಸಿ ಪ್ರಾಯೋಜಕತ್ವದ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಷಾ ಚಳವಳಿ ಕುರಿತು ಪ್ರಬಂಧ ಮಂಡಿಸಿದ್ದಾರೆ. ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರಗೊಂಡಿವೆ. ಪತ್ರಿಕೆಗಳಲ್ಲೂ ಇವರ ಲೇಖನಗಳು ಪ್ರಕಟವಾಗಿವೆ. ಕೃತಿಗಳು: ಕೀರ್ತನ ಸಾಹಿತ್ಯ ಸಂಸ್ಕೃತಿ, ಸಾಹಿತ್ಯ ಸ್ಫುರಣ, ಸಂಸ್ಕೃತಿ ಶೋಧ, ಶೋಧ ತರಂಗ, ಚಿಂತನ ಸಿರಿ, ಸಾಹಿತ್ಯ ಶೋಧ, ಕಲಾವಿದರ ಬದುಕು, ಕೀರ್ತನ ಸಂಗ್ರಹ, ಆಯ್ದ ಕೀರ್ತನೆಗಳು, (ಎಂ.ಎ. ಪ್ರಥಮ ಸೆಮ್ ಗೆ ಪಠ್ಯ), ಸಂವಹನ ಕನ್ನಡ, ಕರ್ನಾಟಕ ಸಂಸ್ಕೃತಿ, ಹರಿದಾಸ ಸಿರಿದೀಪ್ತಿ.