ಈ ಕೃತಿಯಲ್ಲಿ ಸ್ತ್ರೀವಾದ ಆರಂಭಗೊಂಡುದರ ಸಾಮಾಜಿಕ ಹಿನ್ನಲೆ, ಮಾನಸಿಕ ಅಧಿಷ್ಟಾನ, ಸ್ತ್ರೀಸ್ವಾತಂತ್ರದ ಹೋರಾಟವನ್ನು ಅತ್ಯಂತ ಸೂಕ್ಷ್ಮ ಹಾಗು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದ್ದು, ಈ ಅಂಶಗಳ ಆಧಾರದ ಮೇಲೆ ಸ್ತ್ರೀವಾದಿ ವಿಮರ್ಶೆಯ ವೈಚಾರಿಕ ಆಶಯಗಳನ್ನೂ ನೀಡಲಾಗಿದ್ದು, ಮರಾಠಿ ಭಾಷೆಯ ಕತೆ ಕವಿತೆ ಆತ್ಮಚರಿತ್ರೆ ಮತ್ತು ಸ್ತ್ರೀ ಲಿಖಿತ ಜನಪ್ರಿಯ ಕಾದಂಬರಿಗಳನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ನೋಡಿರುವುದರ ದೃಷ್ಟಿಕೋನ ಈ ಕೃತಿಯಲ್ಲಿ ದೊರೆಯುತ್ತದೆ.ಈ ಕೃತಯು ಒಳಗೊಂಡಿರುವ ಅಧ್ಯಾಯಗಳೆಂದರೆ:ಸ್ತ್ರೀವಾದ : ಸ್ತ್ರೀ - ಪ್ರತಿಮೆ ಮತ್ತು ಪಾರ್ಶ್ವಭೂಮಿ ,ಸ್ತ್ರೀಸ್ವಾತಂತ್ರ್ಯ - ಸಮಾಜ ಮತ್ತು ಮನಃಶಾಸ್ತ್ರ ,ಸ್ತ್ರೀವಾದಿ ವಿಮರ್ಶ ,ಮಹಿಳೆಯರ ವ್ರತ ಕತೆಗಳು ,ನನ್ನ ಪರಿಚಯದ ಮಜಲು ,ಅಂಡ್ ದೆ ಲೀವ್ ಹ್ಯಾಪಿಲಿ ಎವರ್ ಆಪ್ಟರ್ ,ಎರಡು ಆತ್ಮ ಚರಿತ್ರೆಗಳು.
©2024 Book Brahma Private Limited.