ಕನ್ನಡ ಮತ್ತು ಮಹಾರಾಷ್ಟ್ರದ ನಡುವಿನ ಸಂಬಂಧವನ್ನು, ಸಾಂಸ್ಕೃತಿಕ ಬಾಂಧವ್ಯವನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಡಾ. ಜಿ. ಎನ್. ಉಪಾಧ್ಯ ಅವರು ಬರೆದಿರುವ ಸಂಶೋಧನಾ ಕೃತಿ 'ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು' ಮಾಡುತ್ತದೆ. ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಬಾಂಧವ್ಯ, ಮಹಾರಾಷ್ಟ್ರ ಕನ್ನಡ ಶಾಸನಗಳಲ್ಲಿ ಸ್ಥಳನಾಮಗಳು, ಮಹಾರಾಷ್ಟ್ರದ ಗ್ರಾಮನಾಮಗಳ ಕನ್ನಡತನ, ಸೊಲ್ಲಾಪುರ ಜಿಲ್ಲೆಯ ಗ್ರಾಮನಾಮಗಳು, ದೇಗಲೂರು-ಅಮರಾವತಿಯಾದ ಬಗೆಗಿಷ್ಟು, ನಾವು ಮರೆತ ಮಂಗಳವಾಡ...ಹೀಗೆ ಮಹಾರಾಷ್ಟ್ರದಲ್ಲಿ ಕನ್ನಡ ಬೇರುಗಳನ್ನು ತಡಕಾಡುವ ಆರು ಅಧ್ಯಾಯಗಳಿವೆ ಈ ಕೃತಿಯಲ್ಲಿ, ಯಾವುದೇ ಪ್ರಾಂತದ ಮೇಲೆ ಅರಸರ ಪ್ರಭುತ್ವ ಆಗಾಗ ಬದಲಾಗಬಹುದು. ಆದರೆ ಸ್ಥಳೀಯ ಭಾಷೆಯ ಭಾಗವಾಗಿರುವ ವ್ಯಕ್ತಿ-ಗ್ರಾಮಗಳಿಗೆ ಹೆಸರನ್ನಿಡುವ ಪದ್ಧತಿ ಬದಲಾಗದು. ಜನತೆಯ ಸಂಸ್ಕೃತಿಯ ಘಟಕವಾಗಿರುವ ಈ ಪದ್ಧತಿ ಬಹುಕಾಲ ಗಟ್ಟಿಯಾಗಿ ನಿಲ್ಲುತ್ತದೆ. ಆದುದರಿಂದ ಒಂದು ಸ್ಥಳದ ಪ್ರಾಚೀನ ಇತಿಹಾಸವನ್ನು ಅರಿಯಲು ಈ ಸ್ಥಳನಾಮಗಳು ಬಹುಮುಖ್ಯ ಆಧಾರ' ಎಂದು ಹಿರಿಯ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿಯ ಮಾತಿನ ತಳಹದಿಯ ಮೇಲೆ ಈ ಕೃತಿ ರೂಪುಗೊಂಡಿದೆ.
©2024 Book Brahma Private Limited.