ಕನಕದಾಸರು ಎಲ್ಲ ಕಾಲಕ್ಕೂ ಪ್ರಸ್ತುತರಾಗುತ್ತಾರೆ ಎಂಬುದನ್ನು ಜಗನ್ನಾಥ ಆರ್. ಗೇನಣ್ಣವರ ‘ಕನಕ ಕೀರ್ತನ ಕೌಸ್ತುಭ’ ಕೃತಿಯು ವಿವರಿಸುತ್ತದೆ. ಸಾಮಾಜಿಕ ವಿಡಂಬನೆ, ಮೌಢ್ಯ, ಕಂದಾಚಾರ, ಜಾತೀಯತೆಯಂತಹ ವಿಷಯಗಳನ್ನು ಸಮಾಜದಿಂದ ದೂರವಿರಿಸಬೇಕೆಂದು ಇವರ ಒಟ್ಟು ಸಾಹಿತ್ಯದ ಆಶಯವಾಗಿದೆ. ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ, ವರವ ಕೊಡು ಎನಗೆ ವಾಗ್ದೇವಿ, ಶಿವ ಶಿವ ಶಿವ ಎನ್ನಿರೊ ಮೂಜಗದವರೆಲ್ಲ, ದಾಸನಾಗಬೇಕು ಸದಾಶಿವನ ದಾಸನಾಗಬೇಕು, ಅರಸಿನಂತೆ ಬಂಟನೋ ಹನುಮರಾಯ, ಸೇವಕತನದ ರುಚಿಯನೇನರಿದೆಯೊ, ಎನ್ನ ಕಂದ ಹಳ್ಳಿಯ ಹನುಮ, ರಾಮಾನುಜರೇ ನಮೋ ನಮೋ, ಪರಮ ಪದವಿಯನೀವ ಗುರುಮುಖ್ಯ ಪ್ರಾಣನ, ಶರಣು ಶರಣು, ಜಯಮಂಗಲಂ ನಿತ್ಯ ಶುಭಮಗಲಂ, ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ ಎನಗೆ, ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತ, ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತ, ಯಾತರವನೆಂದುಸರಲಿ, ನಾವು ಕುರುಬರು ನಮ್ಮ ದೇವರು ಬೀರಯ್ಯ, ದಾಸದಾಸರ ಮನೆಯ ದಾಸಿಯರ ಮಗನ ನಾನು, ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ, ನಮಗೆಲ್ಲಿ ಮನೆಗಳಯ್ಯ ನಾರಾಯಣ, ಆರಿಗಾಗಿಲ್ಲ ಆಪತ್ಕಾಲದೊಳಗೆ ಹೀಗೆ ಈ ಕರತಿಯು ಹಲವಾರು ಭಜನಾ ಕೀರ್ತನೆಗಳನ್ನು ಒಳಗೊಂಡಿದೆ.
©2024 Book Brahma Private Limited.