ಸಿಂಪಿ ಲಿಂಗಣ್ಣವರ ಕೃತಿ. ಅವರು ಜನಪದ ಸಾಹಿತ್ಯವನ್ನು ಗ್ರಹಿಸಿ ವಿವರಿಸಿರುವ ಬಗೆ ವಿಶಿಷ್ಟವಾಗಿದೆ. "ಅವರು ರಸಿಕರು, ಗುಣಗ್ರಾಹಿಗಳು, ಸ್ವಾಭಾವಿಕವಾಗಿ ಬೆಳೆದು ನಿಂತ ಜನಪದ ಸಾಹಿತ್ಯವೆಂಬ ಸುಂದರ ಬನದಿಂದ ಘಮಘಮಿಸುವ ನಾನಾ ತರದ ಹೂಗಳನ್ನಾಯ್ದು * ಗರತಿಯ ಬಾಳಸಂಹಿತೆ” ಎಂಬ ಮಾಲೆಯನ್ನು ಹೆಣೆದಿದ್ದಾರೆ. ಇದನ್ನು ಅಳವಡಿಸಿ ಮಹಿಳೆ ಒಂದೇ ಜನ್ಮದಲ್ಲಿ ನಾಲ್ಕು ಅವತಾರಗಳನ್ನು ತಳೆಯುತ್ತಾಳೆ.. ಹುಟ್ಟಿದ ಮನೆಗೆ ಮಗುವಾಗಿ, ಕೊಟ್ಟ ಮನೆಗೆ ಸೊಸೆಯಾಗಿ, ಪತಿಗೆ ಸತಿಯಾಗಿ ತಾನು ಜನ್ಮಕೊಟ್ಟ ಮಗುವಿಗೆ ತಾಯಾಗಿ - ಹೀಗೆ ಲೇಖಕರು ಗರ ತಿಯ ಚತುರವತಾರದ ಅದ್ಭುತ ಪವಾಡವನ್ನು ಇಲ್ಲಿ ಬಣ್ಣಿಸಿದ್ದಾರೆ. ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಅಲ್ಲಿಯ ಪರಿಸರಕ್ಕೆ ಹೊಂದಾ ಣಿಕೆ ಮಾಡಿಕೊಳ್ಳುವುದು ಸುಲಭವೇ? ಅದೆಷ್ಟು ಭಾವನೆಗಳ ತಿಕ್ಕಾಟ, ಅದೆಷ್ಟು ಮಾನಸಿಕ ಒತ್ತಡ ಆಕೆಗೆ. ಈ ಸ್ಥಿತ್ಯಂತರದಲ್ಲಿ ಆಕೆ ಅನುಭವಿಸಿದ ನೋವು-ನಲಿವು, ಕಷ್ಟ ಕಾರ್ಪಣ್ಯ, ಹಿಗ್ಗು ಮುಗ್ಗುಗಳನ್ನು ಗರತಿಯು ಹಾಡಿನ ರೂಪದಲ್ಲಿ ವ್ಯಕ್ತಪಡಿಸಿದ್ದಾಳೆ. ಒಂದು ಸಹಜ ಕ್ರಮ ವೆಂಬಂತೆ ಗರತಿ ಅವುಗಳನ್ನು ಎದುರಿಸಿದ್ದಾಳೆ. ಆಕೆಯ ಪ್ರಯತ್ನಕ್ಕೆ ಒಂದೊಂದು ಸಲ ಯಶ ದೊರೆತಿರಲಿಕ್ಕಿಲ್ಲ. ಆಗೀಗ ಅವಳು ಎಡವಿರಬಹುದು, ಆದರೆ ಒಮ್ಮೆಯೂ ಆಕೆ ತನ್ನ ಕರ್ತವ್ಯಪಾಲನೆಯಿಂದ ಮುಖ ತಿರುಗಿಸಿದ್ದಿಲ್ಲ. ಆದೆಷ್ಟೋ ಸಾರೆ ಪುರುಷನು ಬದುಕನ್ನು ಎದುರಿಸಲಾರದೆ ಪಲಾಯನ ಮಾಡಿದ್ದುಂಟು. ಈ ಮಾತನ್ನು ಲೇಖಕರು ಬಹುಮಾರ್ಮಿಕವಾಗಿ ಹೇಳಿದ್ದಾರೆ. ಎಂದು ಎಂ.ಆರ್ ಜಹಗೀರದಾರ ಮುನ್ನುಡಿಯಲ್ಲಿ ಬರೆದ್ದಾರೆ.
©2024 Book Brahma Private Limited.