ದಾಸ ಸಾಹಿತ್ಯದಲ್ಲಿ ಜಾನಪದ ಅಂಶಗಳು ;ಒಂದು ಅಧ್ಯಯನ.

Author : ಆರ್. ಸುನಂದಮ್ಮ

Pages 306

₹ 85.00




Year of Publication: 1994
Published by: ತಿರುಮಲ ತಿರುಪತಿ ದೇವಾಸ್ಥಾನ
Address: ತಿರುಪತಿ (ತೆಲಂಗಾಣ)

Synopsys

ದಾಸಸಾಹಿತ್ಯದಲ್ಲಿ ಜಾನಪದ ಅಂಶಗಳು;ಒಂದು ಅಧ್ಯಯನ ಕೃತಿಯು ಡಾ. ಆರ್‌ ಸುನಂದಮ್ಮ ರಚಿಸಿದ್ದು, ತಿರುಮಲ ತಿರುಪತಿ ದೇವಾಸ್ಥಾನದ ಧನಸಹಾಯದಿಂದ ಪ್ರಕಟವಾಗಿದೆ. ಕಾಲ ದೃಷ್ಟಿ ಮತ್ತು ಸಾಹಿತ್ಯ ದೃಷ್ಟಿಯನ್ನಿಟ್ಟುಕ್ಕೊಂಡು ಲೇಖಕಿಯು, ಹತ್ತು ಮಂದಿ ದಾಸರನ್ನು ಬಳಸಿಕೊಂಡು ಈ ಕೃತಿಯನ್ನು ರಚಿಸಿದ್ದಾರೆ. ದಾಸಸಾಹಿತ್ಯದ ದೃಷ್ಟಿಯಿಂದ ಗುರುತಿಸಲಾಗಿರುವ ಶ್ರೀಪಾದರಾಜರು ಮತ್ತು ಅವರ ಸಾಹಿತ್ಯವನ್ನು ಇಲ್ಲಿ ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಪುರಂದರದಾಸ ಮತ್ತು ಕನಕದಾಸರನ್ನು ಬೆಳೆಸಿ ಅವರಿಗೆ ಪ್ರೋತ್ಸಾಹ ನೀಡಿದ ವ್ಯಾಸರಾಯರ ಸಾಹಿತ್ಯವನ್ನು ಇಲ್ಲಿ ಪ್ರತ್ಯೇಕ ಪರಿಶೀಲನೆಗೆ ಗುರಿಪಡಿಸಲಾಗಿದೆ. ದಾಸರ ರಚನೆಯಲ್ಲಿ ಕಂಡುಬರುವ ಜಾನಪದ ಅಂಶಗಳ ಅಧ್ಯಯನವನ್ನೂ ಕೂಡ ಈ ಪುಸ್ತಕದಲ್ಲಿ ಚಿತ್ರಿಸಲಾಗಿದೆ.

 

About the Author

ಆರ್. ಸುನಂದಮ್ಮ
(22 August 1960)

ಸಂವೇದನಾಶೀಲ ಸ್ತ್ರೀವಾದಿ ಲೇಖಕಿ ಪ್ರೊ.ಆರ್.ಸುನಂದಮ್ಮ ಅವರು ಮೂಲತಃ ಕೋಲಾರ ಜಿಲ್ಲೆಯ ವೆಂಕಟಾಪುರದವರು. ಕತೆ, ಕಾವ್ಯ, ಕಾದಂಬರಿ, ಸಂಶೋಧನಾ ಮತ್ತು ವೈಚಾರಿಕ ಲೇಖನಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ 2003ರಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಸೇರ್ಪಡೆಯಾದ ಅವರು, ಉಪನ್ಯಾಸಕಿಯಾಗಿ, ರೀಡರ್‌ ಆಗಿ, ಸಹ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕನಕದಾಸ ಅಧ್ಯಯನ ಪೀಠದ ಸಂಯೋಜಕರಾಗಿ, ಎರಡು ಅವಧಿಗೆ ಆರ್ಥಿಕ ಅಧಿಕಾರಿಗಳಾಗಿ, ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆಯಾಗಿರುವ ದೇಶದ ಮೊಟ್ಟಮೊದಲ ಮಹಿಳಾ ವಸ್ತು ...

READ MORE

Related Books