ದಾಸ ಸಾಹಿತ್ಯ ಸಂಪದ

Author : ಅರಳುಮಲ್ಲಿಗೆ ಪಾರ್ಥಸಾರಥಿ

Pages 856

₹ 35.00




Published by: ಅರಳುಮಲ್ಲಿಗೆ ಹರಿದಾಸ ಹೆರಿಟೇಜ್ ಫೌಂಡೇಷನ್
Address: ಕಾಮಧೇನು ಕ್ಷೇತ್ರ, ಬೆಂಗಳೂರು.562 123

Synopsys

ದಾಸ ಸಾಹಿತ್ಯ ಎಂದರೆ ಸೊಬಗಿನ ಸೋನೆ. ವಿವೇಕದ ಪಲ್ಲವ. ಪರಮಾತ್ಮನ ಕಾರುಣ್ಯದ ಕೆನೆಮೊಸರು, ಹಾಗೂ ತನಿಬೆಲ್ಲದ ಸವಿಯಾದ ಅನುಭವ. ಈ ಗ್ರಂಥದ ಉದ್ದಕ್ಕೂ ದಾಸರ ಸಾಧನೆಯ ವಿಶ್ಲೇಷಣೆಯ ಸುಧಾ. ಹಾಗಾಗಿಯೇ ಈ ಕೃತಿ ಮಕರಂದ. ಓದುಗರಿಗೆ ಇಲ್ಲಿ ಮಧುಕರ ವೃತ್ತಿಯ ಅನುಭವವಾಗುತ್ತದೆ‌. ಹತ್ತು ಹಲವು ಲೇಖಕರ ವಿದ್ವತ್ಪೂರ್ಣ ಅಪೂರ್ವ ಸಂಗ್ರಹದ ಭಾಗ 1 ರಲ್ಲಿ 63 ಲೇಖನಗಳು ಹಾಗೂ ಭಾಗ 2 ರಲ್ಲಿ 35 ಲೇಖನಗಳೊಗೊಂಡ ಅಪೂರ್ವ ಸಂಗ್ರಹದ ವಿಶಿಷ್ಟ ಭಂಡಾರವೇ ಈ ಕೃತಿ.

About the Author

ಅರಳುಮಲ್ಲಿಗೆ ಪಾರ್ಥಸಾರಥಿ
(22 March 1948)

ಅರಳುಮಲ್ಲಿಗೆ ಪಾರ್ಥಸಾರಥಿ (ಜನನ: 22 -03-1948) ಹರಿದಾಸ ಸಾಹಿತ್ಯದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಕೃಷ್ಣಮೂರ್ತಿರಾವ್ ಮತ್ತು ತಾಯಿ ರಂಗಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅರಳು ಮಲ್ಲಿಗೆಯಲ್ಲಿ. ದೊಡ್ಡಬಳ್ಳಾಪುರದ ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ, ಬೆಂಗಳೂರಿನ ಆರ್.ಸಿ. ಕಾಲೇಜಿನಿಂದ ಬಿ.ಕಾಂ., ಸೆಂಟ್ರಲ್ ಕಾಲೇಜಿನಿಂದ ಎಂ.ಕಾಂ ಪದವಿ, ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಪಡೆದರು. ಕೃತಿಗಳು: ವಿಷ್ಣು ಸಹಸ್ರನಾಮ (ಇಂಗ್ಲಿಷ್) ವಿಷ್ಣುಸಹಸ್ರನಾಮ (ಕನ್ನಡ) ಅರಳುಮಲ್ಲಿಗೆ ಅಮೃತ ನುಡಿಗಳು ಹರಿದಾಸರ 4500ಹಾಡುಗಳು ವಾದಿರಾಜ ಸಂಪುಟ ಶ್ರೀಪಾದರಾಜ ಸಂಪುಟ ವ್ಯಾಸರಾಜ ಸಂಪುಟ ಹರಿದಾಸ ಝೇಂಕಾರ ತರಂಗಿಣಿ ಪುರಂದರ ...

READ MORE

Related Books