ಶಂ.ಬಾ. ಜೋಶಿ ಅವರು ಸ್ವತಂತ್ರ ವಿಚಾರವಾದಿಗಳು. ಸಂಸ್ಕೃತಿ ಸಂಶೋಧಕರು. ಭಾರತದ ಪುನರ್ ನಿರ್ಮಾಣದ ಕಾಲದಲ್ಲಿ ಯಾವ ವಿಚಾರಗಳನ್ನು ಆಧರಿಸಬೇಕು ಎಂಬುದು ಸವಾಲಾಗಿದೆ. ಸನಾತನಿಗಳ ದೈವಿದೃಷ್ಟಿಯೂ ಹಾಗೂ ಆಧುನಿಕರ ಭೌತಿಕ ದೃಷ್ಟಿಯೂ ಮೇಳೈಸಬೇಕಿದೆ. ಸಮಾಜ ದರ್ಶನ ಕೃತಿಯಲ್ಲಿ ಸಮಾಜ ಎಂಬುದುಂಟೇ?, ಸಮಾಜ-ವಿಕಾಸ, ಸಮಾಜ-ವಿಚಾರ ಹಾಗೂ ವ್ಯಕ್ತಿ ಮತ್ತು ಸಮಾಜ ಎಂಬ ಅಧ್ಯಯಗಳಿದ್ದು, ವಿದ್ವತ್ ಪೂರ್ಣವಾದ ಚಿಂತನೆಗಳನ್ನು ಸಂಕಲಿಸಲಾಗಿದೆ.
©2024 Book Brahma Private Limited.