ಕಲಬುರ್ಗಿ ಜಿಲ್ಲೆಯ ಜಾತ್ರೆಗಳು

Author : ಚಿ.ಸಿ. ನಿಂಗಣ್ಣ

Pages 256

₹ 300.00




Year of Publication: 2016
Published by: ಕಾವ್ಯಕಿರಣ ಪ್ರಕಾಶನ
Address: ,ಸುಂದರಿಬಾಯಿ ಚಿ.ಸಿ.ನಿಂಗಣ್ಣ, ಮನೆ ಸಂಖ್ಯೆ: 3-979/ 5-ಬಿ, ಗಾಜಿಪುರ, ಕಲಬುರಗಿ-585102
Phone: 9686157060

Synopsys

ಲೇಖಕ ಡಾ. ಚಿ.ಸಿ.ನಿಂಗಣ್ಣ ಅವರ ಕೃತಿ-ಕಲಬುರ್ಗಿ ಜಿಲ್ಲೆಯ ಜಾತ್ರೆಗಳು. ಅವಿಭಜಿತ ಕಲಬುರ್ಗಿ ಜಿಲ್ಲೆಯ ಜಾತ್ರೆಗಳು ಕುರಿತು ಲೇಖಕರ ಮಹಾಪ್ರಬಂಧವಿದು. ಕಲಬುರಗಿ ಜಿಲ್ಲೆಯ ಜನಪದ ಸಂಸ್ಕೃತಿಯನ್ನು ಅನಾವರಣ ಗೊಳಿಸಲಾಗಿದೆ. ಜಾತ್ರೆಗಳಲ್ಲಿ ಜಾನಪದ ಬದುಕಿನ ಆಚರಣೆಗಳು ಅನಾವರಣಗೊಂಡಿರುತ್ತವೆ. ಜಾತ್ರೆಗಳು ಜನಪದರ ಬಹು ಉಪಯುಕ್ತ ಸಂಸ್ಥೆಯಾಗಿ ಬೆಳೆದು ಬಂದಿವೆ.  ಜಾತ್ರೆಗಳು ಜಾನಪದ ಕಲೆ, ಸಂಸ್ಕೃತಿ, ಆಚರಣೆ, ಸಾಹಿತ್ಯ, ಸಂಗೀತ, ಮನರಂಜನೆ, ಸಾಹಸಗಳ ಪ್ರದರ್ಶನಕ್ಕೆ ಉತ್ತಮ ವೇದಿಕೆ ಒದಗಿಸುತ್ತದೆ. ಗ್ರಾಮೀಣ ಜನರ ಸಾಮಾಜಿಕ-ಆರ್ಥಿಕ ಪರಿವರ್ತನೆಯಲ್ಲೂ, ಭಾವೈಕ್ಯತೆಯನ್ನು ಮೆರೆಯುವಲ್ಲಿಯೂ ಈ ಜಾತ್ರೆಗಳು ಬಹುಮುಖಿಯಾಗಿ ಪಾತ್ರವನ್ನು ನಿರ್ವಹಿಸುತ್ತವೆ. ಇಂತಹ ವಿಷಯಗಳ ಮೇಲೆ ಸುದೀರ್ಘವಾಗಿ ಚರ್ಚಿಸಿದ ಗ್ರಂಥವಿದು. 

About the Author

ಚಿ.ಸಿ. ನಿಂಗಣ್ಣ

ಲೇಖಕ ಡಾ. ಸಿ. ಚಿ. ನಿಂಗಣ್ಣ ಅವರು ಮೂಲತಃ ಕಲಬುರಗಿಯವರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಚೆಯಲ್ಲಿ ಪಡೆದರು. “ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ” ವಿಷಯವಾಗಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧ ಸಲ್ಲಿಸಿ, ಪಿಎಚ್ ಡಿ ಪಡೆದರು. ಸದ್ಯ, ಕಲಬುರಗಿಯ  ಸಂತ ಜೋಸೆಫ್ ಪಿ.ಯು. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಕ.ಸಾ.ಪ. ಸಾಹಿತ್ಯ ಸಂಚಾಲಕರಾಗಿದ್ದು, ವಚನಸಾಹಿತ್ಯ, ಜಾನಪದ ಹಾಗೂ ವಿಮರ್ಶೆ ವಲಯದಲ್ಲಿ ವಿಶೇಷ ಆಸಕ್ತಿ. ಕೃತಿಗಳು: ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ (ಮಹಾಪ್ರಬಂಧ) ಕನ್ನಡ ವ್ಯಾಕರಣ, ಬಡವರ ಬಂಗಾರ, ಶಿವಾಜಿ, ಹಬ್ಬಗಳು, ಸ್ಪಂದನ, ಬಸವಣ್ಣನವರ ವಚನಗಳಲ್ಲಿ ಸಮಾಜೋಧಾರ್ಮಿಕ ಪ್ರಜ್ಞೆ ...

READ MORE

Related Books