ಪ್ರಾಚೀನ ಪರಂಪರೆಯ ಜ್ಞಾನ ಶಾಖೆಗಳನ್ನು ಉಳಿಸಿಕೊಂಡು ಬರುವಲ್ಲಿಯ ಮಹತ್ವದ ಕೃತಿ ’ಕರ್ನಾಟಕ ಬುಡಕಟ್ಟುಗಳ ಸಚಿತ್ರಕೋಶ’. ಈ ಕೃತಿಯನ್ನು ಡಾ.ಹಿ.ಚಿ. ಬೋರಲಿಂಗಯ್ಯ ಮತ್ತು ಪ್ರಾಧ್ಯಾಪಕರಾದ ಎ.ಎಸ್. ಪ್ರಭಾಕರ್ ಅವರು ಸಂಪಾದಿಸಿದ್ದಾರೆ. ಬುಡಕಟ್ಟುಗಳಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ದೇಸಿ ಸ್ವರೂಪದ ಸಾಂಸ್ಕೃತಿಕ ಸಂಗತಿಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಅನನ್ಯತೆಗಳನ್ನು ಹಾಗೂ ಅವರ ಆರ್ಥಿಕ ಸ್ಥಿತಿಗತಿಯ ತಲ್ಲಣಗಳನ್ನು ಸಂಕ್ಷಿಪ್ತ ಬರಹ ಮತ್ತು ಅಪರೂಪದ ಚಿತ್ರಗಳ ಮೂಲಕ ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಈ ಕೃತಿಯು 2013ರಲ್ಲಿ ಮೊದಲ ಮುದ್ರಣ ಕಂಡಿತ್ತು.
©2025 Book Brahma Private Limited.