ಲಿಂಗಸಂಬಂಧಗಳು ಮತ್ತು ಅಭಿವೃದ್ಧಿ

Author : ಟಿ.ಆರ್‌. ಚಂದ್ರಶೇಖರ

Pages 204

₹ 120.00




Year of Publication: 2010
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

’ಲಿಂಗಸಂಬಂಧಗಳು ಮತ್ತು ಅಭಿವೃದ್ಧ” ಡಾ. ಟಿ.ಆರ್. ಚಂದ್ರಶೇಖರ್ ಬರೆದ ಕೃತಿ. ಲಿಂಗಸಂಬಂಧ ಹಾಗೂ ಅಭಿವೃದ್ಧಿ-ಈ ಎರಡರ ನಡುವಿನ ಸಂಬಂಧಗಳನ್ನು ವಿವಿಧ ನೆಲೆಗಳಲ್ಲಿ ಪರಿಶೀಲಿಸಲಾಗಿದೆ. ಲಿಂಗಸಂಬಂಧಗಳ ಸಾಮಾಜಿಕ ಮತ್ತು ಜಾತಿ ಸ್ವರೂಪ ಕುರಿತಂತೆ ಅನೇಕ ಒಳನೋಟಗಳನ್ನು ಈ ಕೃತಿಯು ನೀಡುತ್ತದೆ.

ಒಟ್ಟು ಹತ್ತು ಪ್ರಬಂಧಗಳಿದ್ದು ಮಹಿಳೆಯರ ಸ್ಥಿತಿಗತಿ-ಸ್ಥಾನಮಾನಗಳ ಬಗ್ಗೆ ಹೊಸ ನೊಟವನ್ನು ನೀಡುತ್ತವೆ. ಅಭಿವೃದ್ಧಿಯು ಉನ್ನತಮಟ್ಟಕ್ಕೆ ಸಾಗಿದಂತೆ ಲಿಂಗ ಅಸಮಾನತೆಗಳು ತನ್ನಷ್ಟೆ ತಾವು ಮರೆಯಾಗಿ ಬಿಡುತ್ತವೆ ಎಂಬ ಪ್ರಮೇಯವನ್ನು ಪ್ರಶ್ನೆ ಮಾಡುವ ಇಲ್ಲಿನ ಪ್ರಬಂಧಗಳು, ಮಹಿಳಾ ಅಭಿವೃದ್ಧಿಯನ್ನು ಪ್ರಜ್ಞಾಪೂರ್ವಕವಾಗಿ ಸಾಧಿಸಿಕೊಳ್ಳಬೇಕು ಎಂಬ ಅಗತ್ಯ ಹಾಗೂ ಅನಿವಾರ್ಯತೆಯನ್ನು ಲೇಖನಗಳು ಪ್ರತಿಪಾದಿಸುತ್ತವೆ. 

About the Author

ಟಿ.ಆರ್‌. ಚಂದ್ರಶೇಖರ
(07 April 1951)

ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಟಿ.ಆರ್‌. ಚಂದ್ರಶೇಖರ್‌ ಅವರು ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅವರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಕೂಡ ಆಗಿದ್ದರು. 2103ರಲ್ಲಿ ನಿವೃತ್ತರಾದ ನಂತರ ಬೆಂಗಳೂರು ನಿವಾಸಿಯಾಗಿದ್ದಾರೆ. ಅಭಿವೃದ್ಧಿ ಅದರ ಪರಿಕಲ್ಪನೆ ಹಾಗೂ ಯೋಜನೆಗಳ ಜಾರಿ, ನೀತಿ-ನಿರೂಪಣೆಗಳಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳ ವರದಿ ಸಿದ್ಧಪಡಿಸಿದ್ದಾರೆ. ...

READ MORE

Related Books