ಸಮಾಜಕಾರ್ಯ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾಗಬಲ್ಲ ಕೃತಿ ಇದಾಗಿದೆ. ಈ ಕೃತಿಯಲ್ಲಿ ಸಮುದಾಯ, ಸಮುದಾಯದ ಪ್ರಕಾರಗಳು, ಸಮುದಾಯದ ಲಕ್ಷಣಗಳು, ಸಮಸ್ಯೆಗಳು, ಸಮುದಾಯ ಸಂಘಟನೆಯ ಇತಿಹಾಸ, ಸಂಘಟನೆ, ಅಭಿವೃದ್ಧಿ, ಸಂಘಟನಾ ಮಾದರಿಗಳು, ಗ್ರಹಿಕೆಗಳು, ವೈಶಿಷ್ಟ್ಯತೆಗಳು, ಧ್ಯೇಯೋದ್ದೇಶಗಳು, ತತ್ತ್ವಗಳು, ಪ್ರಕ್ರಿಯೆಗಳು, ಕಾರ್ಯತಂತ್ರಗಳು ಸಮಾಜಕಾರ್ಯ ಕಾರ್ಯಕರ್ತನ ಪಾತ್ರ, ಇವೇ ಮೊದಲಾದ ಹಲವು ಹತ್ತು ಉಪಯುಕ್ತ ವಿಚಾರಗಳ ಬಗ್ಗೆ ಸಮೃದ್ಧ ಮಾಹಿತಿಗಳನ್ನು ವಿಶೇಷ ರೀತಿಯಲ್ಲಿ ಒದಗಿಸಿದ್ದಾರೆ. ಇವುಗಳ ಜೊತೆಗೆ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿರುವ ಸರ್ವೋದಯ ಮತ್ತು ಇತರ ವಿಶಿಷ್ಟ ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆಯೂ ಸಾಕಷ್ಟು ಸಮರ್ಪಕವಾಗಿ ಪರಿಚಯಿಸಿದ್ದಾರೆ.
©2024 Book Brahma Private Limited.