ಪ್ರತಿ ಊರಿಗೂ ಸಾಮಾಜಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯವಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿಯ ಮರಿಯಮ್ಮನಹಳ್ಳಿಯೂ ಇದಕ್ಕೆ ಹೊರತಲ್ಲ. ಈ ಹಳ್ಳಿಯ ನಡು ಬೀದಿಯಲ್ಲಿ ನಿಂತು ಕಲ್ಲು ಎಸೆದರೆ ಅದು ಒಬ್ಬ ಕಲಾವಿದನಿಗೆ (ಅವರು ನಟರು, ಚಿತ್ರಕಲಾವಿದರು, ವಾದ್ಯಸಂಗೀತಗಾರರು, ಬಯಲಾಟದ ಭಾಗವತರು ಇತ್ಯಾದಿ) ತಾಗುತ್ತದೆ ಎಂಬುದು. ಈ ನೆಲವು ಕಲಾವಿದರ ಬೀಡು. 1952ರಲ್ಲಿ ತುಂಗಾಭದ್ರ ನದಿಗೆ ಆಣೆಕಟ್ಟು ನಿರ್ಮಿಸುವಾಗ ಈ ಭಾಗದ ಬಹುತೇಕ ಹಳ್ಳಿಗಳು ಮುಳುಗಡೆಯಾದವು. ಬಹುತೇಕರು ವಲಸೆ ಹೋದರು. ಕಲಾವಿದರು ತಮ್ಮ ಹಳ್ಳಿಯ ಸಮೀಪದ ದೊಡ್ಡ ಊರು ಮರಿಯಮ್ಮನಹಳ್ಳಿಗೆ ಬಂದು ನೆಲೆಸಿದರು. ಹೊಸಪೇಟೆ ಸುತ್ತಮುತ್ತ ಅದಿರು ಗಣಿ ಕಾರ್ಖಾನೆಗಳು ಸ್ಥಾಪಿತವಾಗಿದ್ದರಿಂದ ಕೆಲಸವೂ ಸಿಕ್ಕಿತ್ತು. ಬದಲಾಗುತ್ತಿರುವ ವಿದ್ಯಮಾನಗಳ ಮಧ್ಯೆಯೂ ಈ ಹಳ್ಳಿಯು ಹೇಗೆ ತನ್ನ ಕಲೆಯ ಜೀವಾಳವನ್ನು ಉಳಿಸಿಕೊಂಡು ಬಂದಿದೆ ಎಂಬುದರ ಕುತೂಹಲಕಾರಿ ಅಂಶಗಳನ್ನು ಬೆಳಕಿಗೆ ತರುವ ಪ್ರಯತ್ನ ಈ ಕೃತಿಯ ಉದ್ದೇಶವೂ ಆಗಿದೆ.
©2024 Book Brahma Private Limited.