ಪ್ರತಿಸಂಸ್ಕೃತಿ

Author : ರಹಮತ್ ತರೀಕೆರೆ

Pages 208

₹ 150.00




Year of Publication: 2013
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560040
Phone: 9448804905

Synopsys

ರಹಮತ್ ತರೀಕೆರೆ ಅವರಿಗೆ ಸಂಸ್ಕೃತಿಯ ಬಹುಮುಖತ್ವ ಹಾಗೂ ಅದರ ಅಲಕ್ಷಿತ ನೆಲೆಗಳ ಹುಡುಕಾಟದಲ್ಲಿ ಸಾಗಿ ದಕ್ಕಿದ್ದನ್ನು ಇಲ್ಲಿ ತೆರೆದಿಟ್ಟಿದ್ಧಾರೆ. ಈವರೆಗೆ ಆದರ್ಶವೆಂದು ಮಂಡಿತವಾದ ಸಂಸ್ಕೃತಿ ವಿವರಗಳನ್ನು, ಹೆಚ್ಚು ಆರೋಗ್ಯಕರವಾದ ಪ್ರತಿಸಂಸ್ಕೃತಿಯ ವಿವರಗಳನ್ನು ಇಲ್ಲಿ ತೋರಿಸುತ್ತಾರೆ. ಅವರ ನಿಲುವುಗಳ ಹಿಂದೆ, ನೋವಿನ ನಡುವೆಯೂ ಅರ್ಥವಂತಿಕೆ ಹಾಗೂ ಅಭಿಮಾನಗಳನ್ನು ಕಾಪಾಡಿಕೊಂಡ ಜೀವನಕ್ರಮವೊಂದರ ಒತ್ತಡ, ಒತ್ತಾಸೆಗಳ ಚಿತ್ರಣವಿದೆ. ಈಕೃತಿಯು ಐದು ಬಾರಿ ಮುದ್ರಣ ಕಂಡಿದೆ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books