ಭಾರತದ ಪ್ರಗತಿ ಮತ್ತು ಅಭಿವೃದ್ಧಿಗಳು ಮುಖ್ಯವಾಗಿ ಇಲ್ಲಿಯ ಹಳ್ಳಿಗಳ ಪ್ರಗತಿ ಮತ್ತು ಅಭಿವೃದ್ಧಿಯನ್ನೇ ಅವಲಂಭಿಸಿವೆ. ಸುಮಾರು ಎಪ್ಪರಷ್ಟು ಜನರು ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಕೃತಿಯು ಈ ಗ್ರಾಮೀಣ ಜನರ ಉಡುಗೆ ತೊಡುಗೆಗಳನ್ನು ಪರಿಚಯಿಸುವ, ವಿಶ್ಲೇಷಿಸುವ ಪ್ರಯತ್ನವನ್ನು ಮಾಡಲಾಗಿದೆ.
ಮುಖ್ಯವಾಗಿ ಉತ್ತರ ಕರ್ನಾಟಕದ ಉಡುಪುಗಳು, ಕೊಡವರ ಉಡುಪುಗಳು, ಉತ್ತರ ಕರ್ನಾಟಕದ ಆಭರಣಗಳು, ಮಲೆನಾಡಿನ ಆಭರಣಗಳು, ಕೊಡವರ ಆಭರಣಗಳು, ದಕ್ಷಿಣ ಕನ್ನಡ ಜಿಲ್ಲೆಯ ಆಭರಣಗಳು, ಉತ್ತರ ಕನ್ನಡ ಜಿಲ್ಲೆಯ ಆಭರಣಗಳ ಕುರಿತು ಈ ಕೃತಿಯು ಮಾಹಿತಿ ನೀಡುತ್ತದೆ. ದೇವೇಂದ್ರ ಕುಮಾರ ಹಕಾರಿ ಹಾಗೂ ಕೆ.ಆರ್. ಸಂಧ್ಯಾರೆಡ್ಡಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
©2024 Book Brahma Private Limited.