‘ಲೋಕ ದೃಷ್ಟಿ’ ಸಿ.ಜಿ. ಲಕ್ಷ್ಮೀಪತಿ ಅವರ ಕೃತಿಯಾಗಿದೆ. ಸಮಾಜಶಾಸ್ತ್ರ ಎಂಬುದು ಮಾರ್ಷಲ್ ಆರ್ಟ್ನಂತೆ ಈ ಸಮರಕಲೆ ಸ್ವರಕ್ಷಣೆಗೆ ಉಪಯೋಗಿಸಲ್ಪಡಬೇಕೇ ಹೊರತು ಇತರರನ್ನು ಬಗ್ಗುಬಡಿಯಲು, ನಿಯಂತ್ರಿಸಲು ಅಲ್ಲ. ದಲಿತರು, ಅಲ್ಪಸಂಖ್ಯಾತರು, ಬಡಜನತೆಯ ಬದುಕಿನ ಬಹುಮಗ್ಗಲುಗಳನ್ನು ಒಳಗೊಂಡಿರುವ ಲಕ್ಷ್ಮೀಪತಿತಿಯವರ ಸಮಗ್ರ ಚಿಂತನೆಯು ಶೋಧನಾತ್ಮಕ ನೆಲೆಯದ್ದು. ಸಂಕಷ್ಟದ ಹೊತ್ತಲ್ಲಿ ದಮನಿತ ಸಮುದಾಯಗಳು ಸ್ವರಕ್ಷಣೆಗಾಗಿ ಕಂಡುಕೊಳ್ಳುವ ಹೊರದಾರಿಗಳ ಮೇಲೆ ಬೆಳಕು ಚೆಲ್ಲುವ ಅವರ ಬರವಣಿಗೆಯು ಕುಲೀನ ಜಾತಿ-ವರ್ಗಗಳು ಶತಮಾನಗಳಿಂದ ಅನುಭವಿಸಿಕೊಂಡು ಬಂದ ಅಧಿಕಾರ, ಸವಲತ್ತುಗಳನ್ನು ಸದಾ ಕಾಪಾಡಲು ಯತ್ನಿಸುವ ಸಮರಕಲೆಯ ತಂತ್ರಗಾರಿಕೆಯನ್ನೂ ತೀಕ್ಷ್ಣವಾಗಿ ಬಯಲು ಮಾಡುತ್ತವೆ. ಕಳೆದ ಶತಮಾನದ ಹಲವು ಪಾಶ್ಚಾತ್ಯ ವಿದ್ವಾಂಸರ ಚಿಂತನೆಗಳನ್ನು ಈ ಕೃತಿಯ ಪುಟಗಳಲ್ಲಿ ಪೋಣಿಸಿಕೊಟ್ಟ ಲಕ್ಷ್ಮೀಪತಿಯವರ ಪ್ರಯತ್ನ ನಿಜಕ್ಕೂ ಈ ಕಾಲದ ಬಹುಮುಖ್ಯ ಅಗತ್ಯವೊಂದನ್ನು ಸಮರ್ಥವಾಗಿ ಪೂರೈಸಿದೆ. ಹೊಸ ತಲೆಮಾರು ತಮಗೀಗಾಗಲೇ ಸಾಮಾನ್ಯ ಜ್ಞಾನವಾಗಿ ದತ್ತವಾದ ಹಳೆಯ ಕನ್ನಡಕಗಳ ಮೂಲಕ ಸುತ್ತಲಿನ ಜಗತ್ತನ್ನು ನೋಡುವ ದೃಷ್ಟಿಕೋನ ಬದಲಾಗಿ ಹೊಸ ನೋಟಕ್ರಮಗಳು ಈ ಕೃತಿಯ ಮೂಲಕ ಅವರಿಗೆ ದಕ್ಕಲಿ ಎಂದು ರಾಬರ್ಟ್ ಜೋಸ್ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.