ಮುಂಬೈ ಒಂದು ಸಂಕೀರ್ಣ ನಗರ. ಮೂಲ ನಿವಾಸಿಗಳಿಗಿಂತ ವಲಸೆ ಬಂದವರೇ ಹೆಚ್ಮು ಜನ. ಮುಂಬೈ ತುಳು ಹಾಗೂ ಕನ್ನಡಿಗರ ಸಾಹಸ ಸಾಧನೆಗೆ ಎರಡು ಶತಮಾನಗಳ ಸುದೀರ್ಘ ಇತಿಹಾಸವಿದೆ. ಈ ಮಹಾನಗರಕ್ಕೆ ವಲಸೆ ಬಂದ ತುಳುವರು ನಂತರ ನೆಲೆ ನಿಂತ ಬಗೆ, ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ, ತೋರಿದ ಪ್ರತಿಭೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಲೇಖಕ ಡಾ. ವಿಶ್ವನಾಥ ಕಾರ್ನಾಡ್ ಅವರು ನೀಡಿರುವ ಕೃತಿಯೇ-ತುಳುವರ ಮುಂಬೈ ವಲಸೆ.
ಈ ಕೃತಿಯು ಲೇಖಕರ ಸಂಶೋಧನಾ ಮಹಾಪ್ರಬಂಧ. ಇದರಲ್ಲಿ ಒಟ್ಟು 11 ಅಧ್ಯಾಯಗಳಿವೆ. ಮುಂಬೈಗೆ ತುಳುವರ ವಲಸೆಗೆ ಕಾರಣ, ಅವರು ಬೆಳೆದು ಬಂದ ಬಗೆ, ಸಾಧನೆಗಳು, ಮುಂಬೈ ಆಕರ್ಷಣೆ-ಕಾರಣಗಳ ಪರಿಶೀಲನೆ, ವಲಸೆಯ ಕಾಲಘಟ್ಟ ನಿರ್ಣಯ, ತುಳುವರ ಆರ್ಥಿಕ ಅಭ್ಯುದಯ, ಸಾಂಘಿಕ ಜೀವನ, ಸ್ವಜಾತಿ ಸಂಸ್ಥೆಗಳು, ಸಾಂಸ್ಕೃತಿಕ ಜೀವನ, ಸಾಮಾಜಿಕ ಶೈಕ್ಷಣಿಕ ಜೀವನ, ತುಳುವರಿಗೆ ಮುಂಬೈ ಶಾಶ್ವತ ನೆಲೆಯಾಗಬಹುದೆ? ಇತ್ಯಾದಿ ಅಧ್ಯಾಯಗಳು ಮುಂಬೈಯಲ್ಲಿ ನೆಲೆ ನಿಂತ ತುಳುವರ ಸಮಗ್ರ ಜೀವನವನ್ನು ಕಟ್ಟಿಕೊಡುತ್ತದೆ.
©2024 Book Brahma Private Limited.