ಮದುವೆ: ಒಂದು ಜನಪದೀಯ ಅಧ್ಯಯನ- ಈ ಕೃತಿಯು ಡಾ. ಶಾಂತಪ್ಪ ಎನ್. ಡಂಬಳ ಅವರು ರಚಿಸಿದ್ದಾರೆ. ವ್ಯಕ್ತಿಯ ಬದುಕಿನ ಹಾದಿಯಲ್ಲಿ ಮದುವೆ ಎಂಬುದು ಸಾಮಾಜಿಕ-ಸಾಂಸ್ಕೃತಿಕವಾಗಿ ಮಹತ್ವದ ಘಟ್ಟ. ಲೇಖಕಿ ಡಾ. ಶಿವಗಂಗಾ ರುಮ್ಮಾ ಅವರು ಕೃತಿಗೆ ಬೆನ್ನುಡಿ ಬರೆದು‘ ಮುಂದಿನ ಪೀಳಿಗೆಗೆ ಮದುವೆ ಎಂಬ ಸಂಸ್ಥೆಯ ಆಚರಣೆಯ ವಿಧಿ ವಿಧಾನಗಳನ್ನು ಪರಿಚಯಿಸುವುದಷ್ಟೇ ಈ ಕೃತಿ ಮಾಡುವುದಿಲ್ಲ. ಪ್ರಾದೇಶಿಕ ವೈಶಿಷ್ಟ್ಯಗಳನ್ನೂ ಸಹ ದಾಖಲಿಸುತ್ತದೆ. ಮದುವೆ ಸಂಸ್ಥೆಯ ಉಗಮ, ವಿಕಾಸ, ಆಚರಣೆಯ ವಿಧಿವಿಧಾನಗಳು, ಪ್ರಾದೇಶಿಕ ವೈಶಿಷ್ಟ್ಯ, ಹೀಗೆ ವೈವಿಧ್ಯಮಯವಾಗಿ ಚಿತ್ರಿಸುತ್ತದೆ. ಲಗ್ನದ ಪತ್ರಿಕೆ ತೆಗೆಸುವುದು, ಹಂದರ ಹಾಕುವುದು, ಹಾಲಗಂಬ ನೆಡುವುದು, ಒಳಕಲ್ಲು ಪೂಜೆ, ಎಣ್ಣೆ ಹಚ್ಚುವುದು, ಬಾಸಿಂಗ ತರುವುದು, ಪುರವಂತಿಕೆ ಆಡುವುದು, ಕೂಸು ಒಪ್ಪಿಸುವುದು, ಮದುಮಕ್ಕಳಿಗೆ ನೀರು ಎರೆಯುವುದು ಇತ್ಯಾದಿ ಸಂಪ್ರದಾಯಗಳು ಈಗ ಮರೆಯಾಗುತ್ತಿದ್ದು, ಅದನ್ನು ಉಳಿಸಿಕೊಳ್ಳುವತ್ತ ಈ ಕೃತಿ ಮಹತ್ವದ ಕೊಡುಗೆ ನೀಡುತ್ತದೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.