ಜಾನಪದ ತಜ್ಞ ಶ್ರೀ ರಾಮ ಇಟ್ಟಣ್ಣವರು ಹಾಲುಮತಕ್ಕೆ ಸಂಬಂಧಿಸಿದ ಕೃತಿ- ’ಹಾಲಹರವಿ’. ಹಾಲುಮತ ಸಂಸ್ಕೃತಿಯ ಅಧ್ಯಯನಗಳು ಇಲ್ಲಿವೆ. ಕರ್ನಾಟಕದ ಪ್ರಾಚೀನ ಜನಾಂಗಗಳ ಪೈಕಿ ಹಾಲುಮತವೂ ಒಂದು. ದೈವ, ಸಂಪ್ರದಾಯ, ಕಲೆಗಳನ್ನು ಕುರಿತಾಗಿ ಹತ್ತು ಲೇಖನಗಳಿವೆ. ಕುರುಬರ ಅಧಿಧೈವ ಬೀರಪ್ಪನ ಕುರಿತಾಗಿ ಮೂರು ಲೇಖನಗಳಿವೆ. ’ಕುಡವೊಕ್ಕಲಿಗರು’ ತೌಲನಿಕ ಅಧ್ಯಯನವಾಗಿದೆ. ’ಕುರುಬರ ಹುಡುಗಿಗೆ ಮುಂಜಿವೆ’ ಎಂಬ ಲೇಖನ ತೀರ ಅಪರೂಪವಾದ ಕುರುಬರ ಆಚರಣೆಯೊಂದನ್ನು ಹಿಡಿದಿಟ್ಟಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾ. ಇಟ್ಟಣ್ಣವರ ಸರ್ವಾಧ್ಯಕ್ಷತೆಯಲ್ಲಿ ಏರ್ಪಡಿಸಿದ ಹಾಲುಮತ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷ ಭಾಷಣವೂ ಈ ಗ್ರಂಥದಲ್ಲಿದೆ.
©2024 Book Brahma Private Limited.