ಲೇಖಕಿ ವಿದ್ಯಾ ರೆಡ್ಡಿ ಅವರು ಕವಿಯತ್ರಿ. ಉತ್ತಮ ವಾಗ್ಮಿ. ಭಾಷೆ ಹಾಗೂ ಸಂಸ್ಕೃತಿಯ ಉದ್ದೀಪನ, ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಕಾಳಜಿ: ಇವರ ವಿಶೇಷ ಒಲವುಗಳು. ಸಾಂಸ್ಕೃತಿಕ ಸಾಮಾಜಿಕ ಕಾರ್ಯಗಳಿಗಾಗಿ ಹಲವು ಗೌರವ ಪುರಸ್ಕಾರಗಳು ಇವರಿಗೆ ಸಂದಿವೆ. ಪ್ರಸ್ತುತ ಗೋಕಾಕದ ಸತೀಶ ಶುಗರ್‍ಸ್ ಅಕಾಡೆಮಿ ಪದವಿ ಕಾಲೇಜಿನಲ್ಲಿ ಸೇವಾನಿರತರು.
ಕೃತಿಗಳು: ಮಂಜು ಮುಸುಕಿದ ಹಾದಿ (ಕಾದಂಬರಿ) ,ಅಂದಗಾತಿ(ಕವನಸಂಕಲನ)