ಯುವ ಬರಹಗಾರ್ತಿ ಪ್ರೇಮಾಂಜಲಿ ಮೂಲತಃ ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡ್ಯಾಳ ಗ್ರಾಮದವರು. ಹುಟ್ಟಿದ್ದು 1987 ಮೇ 13ರಂದು. ತಾಯಿ ರತ್ನಾಬಾಯಿ ಕಲಕೇರಿ, ತಂದೆ ಮರೆಪ್ಪ. ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವೀಧರರು. ಪಿಎಚ್‌ಡಿಗಾಗಿ ವ್ಯಾಸಂಗ ಮಾಡುತ್ತಿದ್ದಾರೆ. ’ಮಹಿಳಾ ಸಾಹಿತ್ಯ: ಸಮಸ್ಯೆಗಳು ಮತ್ತು ಸವಾಲುಗಳ” ಇವರ ಚೊಚ್ಚಲ ಕೃತಿ.