ಸೀಮೆ

Author : ಅರುಣಕುಮಾರ್ ಎಸ್. ಆರ್.

Pages 50

₹ 30.00




Year of Publication: 1995
Published by: ಜನಪದ ಸಂಘ
Address: ವಿಜಯಾ ಕಾಲೇಜು, ಮುಲ್ಕಿದ.ಕ-574174

Synopsys

ಸೀಮೆ ಕೃತಿಯು ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಈ ಸಂಕಲನದಲ್ಲಿವೆ. 'ಬಿಲ್ಲವರಲ್ಲಿ ಅಷ್ಟಮಿ' (ಚಿತ್ರಾಕ್ಷಿ, ಹೆಜಮಾಡಿಕೊಡಿ), *ಕದಿರು ಹಬ್ಬ' (ಗಣೇಶ, ಕೊಲೆಕಾಡಿ), 'ಆಟಿ ತಿಂಗಳು,' “ಬಂಟರ ಕುಲನಾಮಗಳು - ಒಂದು ಜಿಜ್ಞಾಸೆ' (ಮನಿಷಾ, ಪರಪಾಡಿ), 'ಆಶ್ಲೇಷ ಬಲಿ', (ವಿಠಲರಾವ್, ಪಜಮಾಡಿ). 'ಕಂಬಳ' (ವರಲಕ್ಷ್ಮಿ, ಘನರೂರು), ಕೊರಗ ಜನಾಂಗದ ಜೀವನ ಸಂಬಂಧಿ ಸಂಸ್ಕಾರಗಳು (ಸುಷ್ಮಾ ಎರ್ನಾಳು), 'ಮುಸ್ಲಿಂ ಜನಾಂಗದ ಜೀವನ ಸಂಬಂಧಿ ಸಂಸ್ಕಾರಗಳು', 'ಮುಸ್ಲಿಂ ಹಬ್ಬ' ಗಳು (ಆಶಾ, ಬಿ, ಎರ್ಮಾಳು), 'ಸಂಪ್ರದಾಯ ಗೀತೆಗಳು' (ನಟರಾದ ಆಂಕಿನ ಕಟ್ಟೆ)' ಜನಪದರ ಔಷಧೀಯ ಸಸ್ಯಗಳು (ದೀಪಿಕಾ, ತಜವಾಡಿಕೊಡಿ) - ಹೀಗೆ ಒಟ್ಟು ಹನ್ನೊಂದು ಲೇಖನಗಳಿವೆ.

 

About the Author

ಅರುಣಕುಮಾರ್ ಎಸ್. ಆರ್.

ಅರುಣಕುಮಾರ್ ಎಸ್.ಆರ್. ಅವರು ಮೂಲತಃ ಧರ್ಮಸ್ಥಳ ಸಮೀಪದ ಕನ್ಯಾಡಿಯವರು. ಉಜಿರೆ ಮತ್ತು ಮೈಸೂರಿನಲ್ಲಿ ಶಿಕ್ಷಣ ಪಡೆದು, ಕನ್ನಡ ಮತ್ತು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಳುನಾಡಿನ ಸಿರಿ ಆಲಡೆಗಳ ಅಧ್ಯಯನದೊಂದಿಗೆ ಪಿ.ಹೆಚ್.ಡಿ ಪಡೆದಿದ್ದಾರೆ. ಜಾನಪದದಷ್ಟೇ ಶಿಷ್ಟಸಾಹಿತ್ಯದಲ್ಲೂ ಗಂಭೀರ ಅಧ್ಯಯನ ಆಸಕ್ತರು. ಮುಲ್ಕಿಯ ವಿಜಯ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜು, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲೂ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜಾವಾಣಿಯಲ್ಲಿ 2 ವರ್ಷ ಕಾಲ  'ಸಿರಿದೊಂಪ' ಅಂಕಣ ಬರೆದಿದ್ದಾರೆ. ಉಡುಪಿಯಲ್ಲಿ ಜರುಗಿದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ...

READ MORE

Related Books