ಗೋನಾಳರ ಬದುಕು ಮತ್ತು ಬರಹಗಳು

Author : ಜಿ.ಎಸ್. ಗೋನಾಳ

Pages 124

₹ 125.00




Year of Publication: 2001
Published by: ರುಕ್ಮಿಣಿ ಪ್ರಕಾಶನ

Synopsys

‘ಸಂಸಾರದಲ್ಲಿ ಸಾಮರಸ್ಯ’ ಸ್ತ್ರೀ ಪುರುಷರಲ್ಲಿ ಸಂಸ್ಕಾರಗಳು ಕೃತಿಯು ಜಿ.ಎಸ್. ಗೋನಾಳ ಅವರ ಲೇಖನಸಂಕಲನವಾಗಿದೆ. ಕೃತಿಯ ಕುರಿತು ಲೇಖಕರೇ ಹೀಗೆ ಹೇಳಿಕೊಂಡಿದ್ದಾರೆ; ವಾಸ್ತವದಲ್ಲಿ ದಿನ ನಿತ್ಯ ಬೆರೆತು, ಮಾತಾಡುವ ಸ್ನೇಹಿತರೆ ಇಲ್ಲವೆನ್ನುವಷ್ಟು ವಿರಳ ವಾತಾವರಣವಿದೆ. ಸುಖ-ದುಃಖ ಹಂಚಿಕೊಳ್ಳಲು, ಬದುಕು ಸಾಗಿಸಲು ಆಪ್ತ ಸಂಗಾತಿ, ಬಂಧು, ಗೆಳೆಯ, ಗೆಳತಿಯರೊಂದಿಗೆ ಮುಖಾಮುಖಿಯಾಗಿ ಚರ್ಚಿಸುವ ಮಾತಿಗಿಳಿದು ಕಾಲ ಕಳೆಯುವ, ಬೆರೆಯುವ ರೂಡಿ ಕಡಿಮೆಯಾಗುತ್ತಿದೆ. ಮನೆಯ ಒಳಗಿನ ಹಿರಿಯರು ಹಾಗೂ ಸಮಾಜವನ್ನು ನೋಡಿ ನಮಗರಿವಿಲ್ಲದಂತಯೇ ಕಲಿಯುಬಹುದಾದ ಪಾಠಗಳನ್ನು ಸಕಾಲದಲ್ಲಿ ನಾವೂ ಕಲಿಯದೆ ಹೋದಾಗ, ಸಂಸಾರ, ಸಮಾಜ, ವೃತ್ತಿ ಎಲ್ಲಾ ಕಡೆಯೂ ಸಾಮರಸ್ಯದ ಕೊರತೆ ಕಾಡತೊಡಗುತ್ತದೆ. ನನ್ನಂತೆ ಇತರರು, ನಾನು ಬೇರೆಯವರಿಂದ ಬಯಸುವುದನ್ನು, ಮೊದಲು ನಾನು ಅವರಿಗೆ ನೀಡಬೇಕು. ಇಂತಹ ಪ್ರೀತಿ ಕೂಡಾ ಕೊಳ್ಳವಿಕೆ ಅಕಾರಣವಾಗಿರಬೇಕು. ಅದು ಜಾತಿ, ಅಧಿಕಾರ, ಹಣ, ಅಂತಸ್ತು ಆಧರಿಸಿರಬಾರದು ಎನ್ನುವುದು ಅಂತರಂಗದಲ್ಲಿ ಸಹಜವಾಗಿ ಅರಳಬೇಕು.

ನಾನು ಬಡವಿ ಆತ ಬಡವ
ಒಲವೇ ನಮ್ಮ ಬದುಕು
ಬಳಸಿಕೊಂಡೆವದನೆ ನಾವೂ ಅದಕು ಇದಕು ಎದಕು... ಎಂದು ಹಾಡಿದ ವರಕವಿ ಬೇಂದ್ರೆಯವರು “ಸರಸವೇ ಜನನ ವಿರಸವೇ ಮರಣ”ಎಂಬ ಸಾರ್ವಕಾಲಿಕ ಸಮರಸದ ಸಂದೇಶ ಸಾರಿದ ನೆಲ ನಮ್ಮದು, ಕಾಲಕಾಲಕ್ಕೆ ಈ ವಿಚಾರಗಳನ್ನು ಪುನರ್ ಮನನ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿ. ಎಸ್. ಗೋನಾಳರವರು 'ಸಂಸಾರದಲ್ಲಿ ಸಾಮರಸ್ಯ' ಎಂಬ ಬಿಡಿ ಮಾರ್ಗದರ್ಶಕ ಬರಹಗಳ ಸಂಕಲನ ಹೊರತರುತ್ತಿರುವುದು ಉತ್ತಮ ಪ್ರಯತ್ನವಾಗಿದೆ. ಲಿಂಗ ಸಮಾನತೆ, ಪುರುಷ ಅಹಂಕಾರ ನಿವಾರಣೆ, ವರದಕ್ಷಿಣೆ ಪಿಡುಗು, ಗಂಡು, ಹೆಣ್ಣಿನ ಶಕ್ತಿ ಮತ್ತು ದೌರ್ಬಲ್ಯ ಅಂತರಂಗ ಶುದ್ಧಿ, ಸಮರ್ಪಣೆ, ತ್ಯಾಗ ಮನೋಭಾವಗಳ ಅಳವಡಿಕೆ ಕುರಿತು ಇಲ್ಲಿನ ಬರಹಗಳು ಮೂಡಿ ಬಂದಿವೆ. ಮನುಷ್ಯನ ಎಲ್ಲಾ ಸಾಧನೆಗಳಿಗೆ ಸಂಸಾರಿಕ ಸಾಮರಸ್ಯ ಅಡಿಪಾಯವಿದ್ದಂತೆ ಎಂಬ ಸರಳ ಸತ್ಯವನ್ನು ಈ ಬರಹಗಳು ಹೇಳುತ್ತವೆ.

About the Author

ಜಿ.ಎಸ್. ಗೋನಾಳ

ಜಿ.ಎಸ್. ಗೋನಾಳ ಅವರು ಕ್ರಿಯಾಶೀಲ ಪತ್ರಕರ್ತ, ಸಮಾಜಮುಖಿ ಚಿಂತಕ, ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಮೂಲತಃ ಕೊಪ್ಪಳ ತಾಲೂಕಿನ ಮಾದಿನೂರಿನ ಅಪ್ಪಟ ಗ್ರಾಮೀಣ ಕೃಷಿಕ ಮನೆತನದ ಹಿನ್ನೆಲೆಯವರು. ಧಾರವಾಡ, ಕೊಲ್ಲಾಪುರ ಮಹಾವಿದ್ಯಾಲಯಗಳಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೊಪ್ಪಳ ಜಿಲ್ಲಾ ವಾರ್ತಾ ಪತ್ರಿಕೆಯ ಮೂಲಕ ಹಾಗೂ ಸಾಹಿತ್ಯ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ಜಿಲ್ಲೆಯಲ್ಲಿ ಚಿರಪರಿಚಿತರು. ಕೃತಿಗಳು: ಪ್ರಜಾ ರಕ್ಷಕರೇ ಭಕ್ಷಕರಾದರೇ..?, ಅಂತರಂಗದೊಳ್ ಚಿಗುರಲಿ ಶರಣರ ವಚನಾಮೃತಗಳು, ಸವಾಲುಗಳ ಸರಮಾಲೆಯಲ್ಲಿ ಪತ್ರಿಕೋದ್ಯಮ, ಸಂಸಾರದಲ್ಲಿ ಸಾಮರಸ್ಯ, ಸಮೃದ್ಧಿ ಜೀವನದಲ್ಲಿ ದಾರಿದೀಪಗಳು ...

READ MORE

Related Books