ಪ್ರಜಾ ರಕ್ಷಕರೇ ಭಕ್ಷಕರಾದರೇ..?

Pages 200

₹ 325.00




Year of Publication: 2020
Published by: ವಿಶಾಲ ಪ್ರಕಾಶನ
Address: ಬಸವ ಸದನ, ಪದಕೀ ಲೇಔಟ್, 21ನೇ ವಾರ್ಡ್, ಶಾರದಾ ಸ್ಕೂಲ್ ಹತ್ತಿರ, ಕೊಪ್ಪಳ -583231
Phone: 9448025067

Synopsys

`ಪ್ರಜಾ ರಕ್ಷಕರೇ ಭಕ್ಷಕರಾದರೇ..?’ ಕೃತಿಯು ಜಿ.ಎಸ್. ಗೋನಾಳ ಅವರ ಸ್ವಸ್ಥ ಭಾರತದ ಚಿಂತನಾ ಲಹರಿಗಳಾಗಿವೆ. ಇದು ಇಪ್ಪತ್ತೊಂದು ಲೇಖನಗಳುಳ್ಳ ಒಂದು ಕಿರು ಪುಸ್ತಕವಾಗಿದೆ. ಓದುಗರಿಗೆ, ಜನಪರ, ಕಾಳಜಿಯುಳ್ಳ ವ್ಯಕ್ತಿಗಳಿಗೆ ಮತ್ತು ಸಮಾಜ ಸೇವಾ ಕ್ಷೇತ್ರದಿಂದ ರಾಜಕೀಯ ಆರಂಭಿಸುವವರಿಗೆ ಹಲವಾರು ಮಾರ್ಗೋಪಾಯಗಳಿವೆ. ಯುವಕರು, ಯುವತಿಯರು ಜನಪರವಾದ ಕಳಕಳಿಯುಳ್ಳ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಈ ಕಿರು ಪುಸ್ತಕವು ಸೂಕ್ತ ದಿಕ್ಸೂಚಿಯಾಗಬಲ್ಲದು ಎನ್ನುತ್ತಾರೆ ಲೇಖಕ ಜಿ.ಎಸ್. ಗೋನಾಳ. ಲೇಖನಗಳಲ್ಲಿನ ಮತ್ತೊಂದು ವೈಶಿಷ್ಟ್ಯವೆಂದರೆ ಭಾರತ ಎತ್ತ ಸಾಗುತ್ತಿದೆ? ಸಮಸ್ಯೆಗಳಿಗೆ ಕಾರಣರಾರು? ಎಂದು ಪ್ರಶ್ನಿಸಿದಾಗ ಎಲ್ಲರೂ ಮತ್ತೊಬ್ಬರೆಡೆಗೆ ಬೆರಳು ತೋರಿಸುವುದೇ ಹೆಚ್ಚು. ಆದರೆ ಪ್ರತಿಯೊಂದು ಸಮಸ್ಯೆಗೆ ನಾವೆಲ್ಲರೂ ಸಾಮೂಹಿಕ ಜವಾಬ್ದಾರಿ ಕಾರಣವೆಂದು ವಿವರಿಸುತ್ತದೆ. ಸಾಮೂಹಿಕ ಪರಸ್ಪರ ಸಹಕಾರದಿಂದ ಸಮಸ್ಯೆಗಳನ್ನು ಬಗೆಹರಿಸಬಹುದು. ಇಂತಹ ಸಂದರ್ಭದಲ್ಲಿ ರಾಜಕೀಯ ವ್ಯವಸ್ಥೆ ಬಿಟ್ಟು ಬದುಕಲು ಸಾಧ್ಯವಿಲ್ಲ. ತತಕ್ಷಣದ ಕ್ರಾಂತಿ ಸಮಸ್ಯೆಗಳಿಗೆ ಪರಿಹಾರ ಕೊಡುವುದಿಲ್ಲ, ನಿರಂತರ ಜಾಗೃತಿ, ಸುಧಾರಣೆ, ಶಿಕ್ಷಣ, ಸಮರ್ಥ ನಾಯಕತ್ವಗಳಂತಹ ಧನಾತ್ಮಕ ಶಕ್ತಿಗಳಿಂದ ಸಮಸ್ಯೆಗಳಿಂದ ಹೊರಬರಬಹುದು ಎನ್ನುವುದನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ.

Related Books