ನಿರಂಕುಶಮತಿಯ ಸರ್ವೋದಯ

Author : ಗುರುಪಾದ ಮರಿಗುದ್ದಿ

Pages 136

₹ 100.00




Year of Publication: 2013
Published by: ಸಿವಿಜಿ ಪಬ್ಲಿಕೇಷನ್ಸ್‌

Synopsys

ನಿರಂಕುಶಮತಿಯ ಸರ್ವೋದಯ' ಕೃತಿಯಲ್ಲಿ ಕುವೆಂಪು ಸಾಹಿತ್ಯ ಕುರಿತಾಗಿ ಬರೆದ ಏಳು ಲೇಖನಗಳು ಸೇರಿಕೊಂಡಿವೆ. ಮೊದಲ ಲೇಖನ ಕುವೆಂಪು ದೃಷ್ಟಿಯಲ್ಲಿ ಶಿಕ್ಷಣ ಎಂಬ ವಿಷಯ ಕುರಿತಾದುದು. ಇಂದು ಆ ರಂಗ ಹೊಸ ಸವಾಲು ಎದುರಿಸುತ್ತಿದೆ. ಅದರ ಬಗೆಗೆ ಕುವೆಂಪು ಸಾಹಿತ್ಯದಲ್ಲಿ ಅನೇಕ ವಿಚಾರಗಳು ಅಂತರ್ಗತವಾಗಿವೆ. ಅವು ಬಹುಮಟ್ಟಿಗೆ ಇಂದಿಗೂ ಪ್ರಸ್ತುತವಾಗಬಲ್ಲವು. ಶಿಕ್ಷಣದ ಹೆಸರಿನಲ್ಲಿ ವ್ಯಾಪಾರ ಮತ್ತು ಹಿಂಸೆ,ನಿಗ್ರಹ, ಒತ್ತಡ ಸೃಷ್ಟಿಯಾಗುತ್ತಿರುವ ಇಂದಿನ ದಿನಗಳಲ್ಲಿ ತಾವು ಎಚ್ಚರವಾಗಿ ವಿವೇಕದಿಂದ ವರ್ತಿಸದಿದ್ದರೆ, ಮುಂದಿನ ದಿನಗಳಲ್ಲಿ ಶಿಕ್ಷಣದಿಂದ  ಸಾಮಾಜಿಕ ಕ್ಷೇಮಕ್ಕೆ, ಶಾಂತಿ ನೆಮ್ಮದಿಗಳಿಗೆ ವ್ಯತ್ಯಯವಾಗುವುದು ಖಂಡಿತ. ಕುವೆಂಪು ಅಹಂಭಾವ ನಾಶಪಡಿಸುವ, ಚಾರಿತ್ರ ಎತ್ತರಿಸುವ, ಸಮನ್ವಯ ಸಾಧಿಸುವ ಶಿಕ್ಷಣಕ್ಕಾಗಿ ಚಿಂತಿಸಿದರು.

"ವಿದ್ಯಾಚೇತನ' ಕೃತಿಗಾಗಿ ಬರೆದ ಈ ಲೇಖನದಲ್ಲಿ ಕುವೆಂಪು ಶಿಕ್ಷಣದ ಚಿಂತನೆಗಳ ವ್ಯಾಪಕತೆ ಗುರುತಿಸಲು ಯತ್ನಿಸಲಾಗಿದೆ. "ಕುವೆಂಪು ಕಾದಂಬರಿಗಳಲ್ಲಿ ದಲಿತರು' 'ಲೇಖನವನ್ನು "ದಲಿತಪ್ರಜ್ಞೆ' ಕೃತಿಗಾಗಿ ಬರೆಯಲಾಗಿತ್ತು. ಈ ವಿಚಾರವಾಗಿ ಹಿ೦ದೆ ಪ್ರಕಟಗೊಂಡಿರುವ ಕೃಷ್ಣಪ್ಪ ಮತ್ತು ಭಗವಾನ್‌ ಅವರಎರಡೂ ಲೇಖನಗಳನ್ನು ನಾನು ಗಮನಿಸಿರುವೆ. ಅವುಗಳಿ೦ದ ಪ್ರಯೋಜನೆ ಪಡೆದರೂ ಭಿನ್ನವಾಗಿ ನನ್ನ ವಿಚಾರಗಳನ್ನು ಇಲ್ಲಿ ಸ್ಪಷ್ಟಪಡಿಸಿರುವೆ.'ಕುವೆಂಪು ಕಾದಂಬರಿಗಳು ಸಾಹಿತ್ಯ,  ಭಾಷೆ,  ಪಾತ್ರ,  ಸಂಸ್ಕೃತಿ,ಪ್ರಾದೇಶಿಕತೆ,ಭಾವ, ವಸ್ತು, ತಂತ್ರ, ಇತ್ಯಾದಿ ಹಿನ್ನಲೆಯಲ್ಲಿ ತುಂಬ ಚರ್ಚೆಗೆ ಒಳಗಾಗಿವೆ. ಇಲ್ಲಿ ಅವುಗಳ ಪರಿಸರ ಚಿತ್ರಣದ ಬಗೆಗೆ ಒಂದು ನೋಟ ಬೀರಲಾಗಿದೆ. ಪರಿಸರ ಕಾಳಜಿ ಕೂಡ ಕುವೆಂಪು ಸಾಹಿತ್ಯದ ಮಹತ್ವದ ಅಂಶ. ಅದು ಕಾದಂಬರಿಗಳಲ್ಲಿ ಬ೦ದಿರುವ ರೀತಿ,  ವಿವರ,  ವರ್ಣನೆ,  ಜನಜೀವನದೊಂದಿಗಿನ ಸಂಬ೦ಧ, ಸಮನ್ವಯ, ಸಂಘರ್ಷಇತ್ಯಾದಿಗಳ ಚಿಂತನೆ ಇಲ್ಲಿದೆ.

ಕಾಡು, ಕಾಡಿನ ಎಲ್ಲ ಅ೦ಗಗಳು ಕಾದಂಬರಿಯ ಪಾತ್ರ, ವಸ್ತು,  ವಿಚಾರಗಳನ್ನು ಪ್ರಭಾವಿಸಿದ ರೀತಿ ಕೂಡ ಗಮನಾರ್ಹ, "ಮಲೆನಾಡಿನ ಚಿತ್ರಗಳು' ಬಗೆಗೆ ಎರಡು ಲೇಖನಗಳು ಇಲ್ಲಿವೆ. ಕನ್ನಡ ಲಲಿತ ಪ್ರಬಂಧಗಳಲ್ಲಿ, ಕಾಡು, ಕಾಡಿನ ಅನುಭವ, ಮಲೆ ಮನೆಗಳ ಆಗು-ಹೋಗುಗಳು ಇಲ್ಲಿಯ ಹಾಗೆ ಇತರತ್ರ ಬಂದಿಲ್ಲ.ಸ್ಮರಣೆಗಳನ್ನು ವರ್ಣಮಯವಾದ ಭಾವಚಿತ್ರಗಳನ್ನಾಗಿ ಇಲ್ಲಿ ಕುವೆಂಪು ಪರಿವರ್ತಿಸಿದ್ದಾರೆ.ನೆನಪುಗಳನ್ನು ಉತ್ಸಾಹಿತವಾಗಿ ಬಿಚ್ಚಿಟ್ಟಿದ್ದರೂ, ಮಣ್ಣಿನ ಗಾಢ ವಾಸನೆ, ಅನುಭವವಿಶೇಷ. ಪ್ರಾದೇಶಿಕ ಬಣ್ಣ ಅಲ್ಲಿದೆ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books