ಹಾಯ್ ದಿನಗಳು

Author : ಯಶೋಮತಿ ರವಿ ಬೆಳಗೆರೆ

Pages 190

₹ 250.00




Year of Publication: 2023
Published by: ಯಶೋಮತಿ ರವಿ ಬೆಳಗೆರೆ
Address: ಯಶೋಮತಿ ರವಿ ಬೆಳಗೆರೆ ಯಶಸ್ವಿ, #19/16/1 2ನೇ ಅಡ್ಡರಸ್ತೆ, ಬಿಎಚ್‌ಇಎಲ್ 2ನೇ ಹಂತ, ರಾಘವೇಂದ್ರ ಬಡಾವಣೆ, ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ ಹತ್ತಿರ, ಪಟ್ಟಣಗೆರೆ, ರಾಜರಾಜೇಶ್ವರಿ ನಗರ, ಬೆಂಗಳೂರು -560 098,
Phone: 9845556005

Synopsys

ಮಧ್ಯಮ ವರ್ಗವೆಂದರೆ ಸಕ್ಕರೆ ಕಾಫಿ ಕೈಗೆ ನಿಲುಕದ, ಬೆಲ್ಲದ ಕಾಫಿ ಕುಡಿಯಲೊಲ್ಲದ ಕಂಗಾಲು ಕಮ್ಯುನಿಟಿ. ಸಂಬಳಕ್ಕೆ, ಅನುಕೂಲಕ್ಕೆ, ಸವಲತ್ತಿಗೆ, ರೇಷನ್ನಿಗೆ, ಗ್ಯಾಸಿಗೆ, ಮಕ್ಕಳ ಸೀಟಿಗೆ ಉಹುಂ. ಯಾವುದಕ್ಕೂ ಬೀದಿಗಿಳಿದು ಹೋರಾಡದ, ಯಾವುದು ಸಿಗದಿದ್ದರೂ ಪೇಚಾಡಿ ಸುಮ್ಮನಾಗುವ ಸ್ವಯಂಪ್ರೇರಿತ ಸಂಭಾವಿತ ಸಮೂಹ. ಆದರೆ ಇಂಥದೊಂದು ನಿರುಪದ್ರವಿ ಸಮೂಹವೇ ನಮ್ಮ ಸಮಾಜದ extremityಯನ್ನು ತಹಬಂದಿಯಲ್ಲಿಡುತ್ತದೆ. ಜೀವನವಿಡೀ ಮಕ್ಕಳಿಗೆ ಪಾಠ ಹೇಳಿಕೊಂಡು ಪ್ರಾಮಾಣಿಕನಾಗಿ ರಿಟೈರಾದ ಪ್ರಾಥಮಿಕ ಶಾಲೆಯ ಮೇಷ್ಟ್ರೇ, ಈ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ನಿಂತ ಮೊದಲ ಗಾರ್ಡ್ ಆಗಿರುತ್ತಾನೆ. ಒಬ್ಬ ಪೋಸ್ಟ್ ಮ್ಯಾನ್, ಅಂಗಡಿಯಲ್ಲಿನ ಗುಮಾಸ್ತೆ, ಮೀಟರ್ ರೀಡರ್, ಆಸ್ಪತ್ರೆಯ ಮೇಲ್ ನರ್ಸ್, ಇತ್ಯಾದಿ ನಿಸ್ಪೃಹ ಜೀವಿಗಳೇ ಸಮಾಜದ ಗಾಲಿಯನ್ನು ಮುಂದಕ್ಕುರುಳಿಸುತ್ತಾರೆ. ಅವರು ಕ್ರಿಯಾಶೀಲರಲ್ಲ, ಹೋರಾಟಗಾರರಲ್ಲ. ವಿಶಿಷ್ಟವಾದ ಯಾವುದನ್ನೂ ಸಾಧಿಸಲಿಲ್ಲ ಅಥವಾ ಸರಿಯಾದ ಪಕ್ಷಕ್ಕೆ ಓಟು ಹಾಕಲಿಲ್ಲ ಎಂದು ಅವರ ಮೇಲೆ ರೇಗುವುದು ನಿರರ್ಥಕ. ಅವರು ಇತಿಹಾಸ ನಿರ್ಮಿಸದೆ ಇರಬಹುದು. ಆದರೆ ಅವರನ್ನು ಬಿಟ್ಟು ಯಾವ ಇತಿಹಾಸವನ್ನೂ ಈ ತನಕ ಬರೆಯಲಾಗಿಲ್ಲ. ‘ಹಾಯ್ ಬೆಂಗಳೂರ್!’ನಂತಹ ಪತ್ರಿಕೆಯ ಸೃಷ್ಟಿಯಾಗುವುದೇ ಇಂತಹ ಕಂಗಾಲು ಕಮ್ಯುನಿಟಿಯ ನಿಸ್ಪೃಹರಿಗಾಗಿ. ಅವರು ಹೇಳಬೇಕೆಂದುಕೊಂಡದ್ದನ್ನು, ಅನ್ನಬೇಕಾದ್ದನ್ನು, ಬೈಯ್ಯಬೇಕಾದ್ದನ್ನು ಈ ಪತ್ರಿಕೆ ಹೇಳುತ್ತದೆ. ಅನ್ನುತ್ತದೆ. ಬೈಯ್ಯುತ್ತದೆ. ಮೇಲುನೋಟಕ್ಕೆ ಇದು ಕಟುಕರ ಮನೆಯ ಗಿಳಿಯಂತೆ ನಿಷ್ಠುರವಾಗಿ ಕಂಡರೂ, ಆಂತರ್ಯದಲ್ಲಿ ಈ ನಾಡಿನ ಬಹುಸಂಖ್ಯಾತ ನಿಸ್ಪೃಹರ ಮನದ ಮಾತುಗಳನ್ನೇ ಇದು ಧ್ವನಿಸುತ್ತದೆ.

About the Author

ಯಶೋಮತಿ ರವಿ ಬೆಳಗೆರೆ

ಯಶೋಮತಿ ರವಿ ಬೆಳಗೆರೆ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕಸಾರಂಗಿ ಗ್ರಾಮದವರು. ಬಿಕಾಮ್, ಇಂಟರ್ನ್ಯಾಷನಲ್ ಗ್ರಾಜುಯೇಟ್ ಡಿಪ್ಲೊಮೋ ಇನ್ ಕೌನ್ಸಿಲಿಂಗ್ ಸ್ಕಿಲ್ಸ್,(IGDCS), ಡಿಪ್ಲೊಮೋ ಇನ್ ಬೊಟಿಕ್ ಮ್ಯಾನೇಜ್ ಮೆಂಟ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಅಕ್ಷರ ವಿನ್ಯಾಸಕಿ, ಪುಟ ವಿನ್ಯಾಸಕಿ, ಅಂಕಣಕಾರ್ತಿ, ಪ್ರಕಾಶಕಿ, ಲೇಖಕಿ, ರವಿ ಬೆಳಗೆರೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕಿ ಹಾಗೂ ಅನಂತ ನೋಟ ಪತ್ರಿಕೆಯ ಪ್ರಧಾನ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಅಕ್ಷರ ವಿನ್ಯಾಸಕಿಯಾಗಿ ಆರಂಭಗೊಂಡ ಪತ್ರಿಕೋದ್ಯಮದ ಒಡನಾಟ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆಯಾಗಿ, ವ್ಯವಸ್ಥಾಪಕ ನಿರ್ದೇಶಕಿಯಾಗಿ, ಓ ಮನಸೇ ಮ್ಯಾಗಝೀನಿನ ಹಾಗೂ ಭಾವನಾ ಪ್ರಕಾಶನದ ...

READ MORE

Related Books