ಇಸ್ಕೂಲು

Author : ಅಕ್ಷತಾ ಕೃಷ್ಣಮೂರ್ತಿ

Pages 184

₹ 200.00




Year of Publication: 2022
Published by: ಜನ ಪ್ರಕಾಶನ
Address: ಜನ ಪ್ರಕಾಶನ, 54, ಭೈರಯ್ಯ ನಿವಾಸ, 11ನೇ ಮೈನ್, 14ನೇ ಕ್ರಾಸ್, 5ನೇ ಬ್ಲಾಕ್, ಜಯನಗರ, ಬೆಂಗಳೂರು-560041
Phone: 94483 24727

Synopsys

ಲೇಖಕಿ ಅಕ್ಷತಾ ಕೃಷ್ಣಮೂರ್ತಿ ಅವರ ಲೇಖನಗಳ ಸಂಗ್ರಹ ಇಸ್ಕೂಲು. ಸರಕಾರಿ ಶಾಲೆಯ ಟೀಚರ್ ಹೇಳುವ ಕತೆ ಎಂಬ ಉಪಶೀರ್ಷಿಕೆಯನ್ನು ಈ ಸಂಕಲನ ಹೊಂದಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಈ ಸಂಕಲನಕ್ಕೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಇಡೀ ಕೃತಿಯಲ್ಲಿ ‘ರಾಧಕ್ಕೋರು’ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಜೊತೆ ಓಡಾಡುತ್ತಲೇ ಉತ್ತಮ ಶಿಕ್ಷಣಕ್ಕೆ ಸಿದ್ಧಗೊಳಿಸಿದ ವಿವರಗಳು ತುಂಬಿಕೊಂಡಿದೆ. ಹೀಗೆ ಸಿದ್ಧಗೊಳಿಸುವಾಗ ಸಿದ್ದ ಮಾದರಿಯನ್ನು ಅನುಸರಿಸುವುದಿಲ್ಲ. ಆಯಾ ಸಂದರ್ಭಕ್ಕೆ ತಕ್ಕುದಾದ, ಪರಿಸರ ಪೂರಕವಾದ ಕ್ರಿಯಾ ಮಾದರಿಗಳ ಮೂಲಕವಾಗಿ ಮಕ್ಕಳ ಮನಸ್ಸನ್ನು ಮುದಗೊಳಿಸುತ್ತಲೇ ಕಲಿಸುವ ‘ರಾಧಕ್ಕೋರು’ ತಮಗೆ ತಾವೇ ಒಂದು ಶೈಕ್ಷಣಿಕ ಮಾದರಿಯಾಗುತ್ತಾರೆ. ಇಸ್ಕೂಲು ಕೃತಿಯು ಕೇವಲ ಶಾಲೆಗೆ ಮಾತ್ರ ಸೀಮಿತವಾಗುವುದಿಲ್ಲ. ಶಾಲೆಗೆ ಆಸುಪಾಸಿನ ಭೌಗೋಳಿಕ ಪರಿಸರವನ್ನು ಪ್ರೀತಿಪೂರ್ವಕ ಪದ ಸಂಯೋಜನೆಯ ಮೂಲಕ ನಿರೂಪಿಸುತ್ತದೆ ಎಂದು ಬರೆದಿದ್ದಾರೆ.

About the Author

ಅಕ್ಷತಾ ಕೃಷ್ಣಮೂರ್ತಿ
(02 November 1981)

ಅಕ್ಷತಾ ಕೃಷ್ಣಮೂರ್ತಿಯವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿಯಲ್ಲಿ 02 ನವೆಂಬರ್1981 ರಲ್ಲಿ ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಅತಿ ಹೆಚ್ಚು ಅರಣ್ಯ ಹೊಂದಿರುವ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಹಿಂದುಳಿದ ಜೊಹಿಡಾ ತಾಲೂಕಿನ ಹುಲಿ ಸಂರಕ್ಷಿತ ಪ್ರದೇಶದ ಅಣಶಿಯಲ್ಲಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕಿ ವೃತ್ತಿಯ ಜೊತೆಯಲ್ಲಿ ಕನ್ನಡದ ಹಲವಾರು, ದಿನ ಪತ್ರಿಕೆ ,ವಾರಪತ್ರಿಕೆ, ಪಾಕ್ಷಿಕಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಮೂಲಕ ಹವ್ಯಾಸಿ ಬರಹಗಾರರಾಗಿದ್ದಾರೆ. ಹಲವಾರು ಕೃತಿ, ಕವನ ಸಂಕಲನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ...

READ MORE

Reviews

https://www.prajavani.net/artculture/book-review/iskulu-book-review-kannada-literature-1010473.html 

Related Books