ವೈದ್ಯಭೂಷಣ ಡಾ. ಬಿ. ಎಮ್. ಹೆಗ್ಡೆ.

Author : ಕಲಾ ಭಾಗ್ವತ್



Year of Publication: 2021
Published by: ಸ್ನೇಹಾ ಪ್ರಿಂಟರ್ಸ್
Address: ಬೆಂಗಳೂರು.

Synopsys

ಲೇಖಕಿ ಕಲಾ ಭಾಗ್ವತ್ ಅವರ ಲೇಖನಗಳ ಸಂಕಲನ ವೈದ್ಯಭೂಷಣ ಡಾ. ಬಿ. ಎಮ್. ಹೆಗ್ಡೆ. ವೈದ್ಯಕೀಯ ಲೋಕದ ಓರೆಕೋರೆಗಳನ್ನು ಎತ್ತಿ ತೋರಿಸುತ್ತಾ, ಜನರ ಮಿಥ್ಯಾನಂಬಿಕೆಗಳನ್ನು ಅನಾವರಣಗೊಳಿಸುತ್ತಾ, ಆರೋಗ್ಯಕರ ಜೀವನಕ್ಕೆ ಅಳವಡಿಸಿಕೊಳ್ಳಲು ಸೂಕ್ತ ಸಲಹೆಗಳನ್ನು ಸೂಚಿಸುತ್ತಾ ಜನರಲ್ಲಿ ಧೈರ್ಯ ತುಂಬುತ್ತಲೇ ಬರುತ್ತಿರುವವರು ನಿರ್ಭೀತ ವ್ಯಕ್ತಿತ್ವದ , ನೇರ ನಡೆನುಡಿಯವರು ಬೆಳ್ಳೆ ಮೋನಪ್ಪ ಹೆಗ್ಡೆಯವರು. ಪದ್ಮಭೂಷಣ ಡಾ. ಹೆಗ್ಡೆಯವರ ಜೀವನದ ಕುರಿತಾದ ಈ ಕೃತಿ ಮುಂಬೈ ವಿಶ್ವವಿದ್ಯಾಲಯದ ಎಂ. ಎ ವಿದ್ಯಾರ್ಥಿ ಕಲಾ ಭಾಗ್ವತ್ ಅವರ ಶೋಧ ಸಂಪ್ರಬಂಧ. ಅವರ ಸಾಧನೆಯನ್ನು ಬಿಂಬಿಸುವ ಮೊದಲ ಕೃತಿ ಎಂದು ಮುಂಬೈ ವಿಶ್ವವಿದ್ಯಾಲಯದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಆದ ಡಾ. ಜಿ. ಎನ್. ಉಪಾಧ್ಯರು ಈ ಕೃತಿಯ ಮುನ್ನುಡಿಯಲ್ಲಿ ಹೇಳಿದ್ದಾರೆ. ಡಾ॥ ಬಿ. ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ , ಜಗದೀಶ ಚಂದ್ರ ಬೋಸ್ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹತ್ತು ಹಲವು ದೇಶ ವಿದೇಶಗಳ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾದ ಡಾ. ಹೆಗ್ಡೆಯವರು ಅಲೋಪತಿ ವೈದ್ಯ, ಪ್ರಖ್ಯಾತ ಹೃದ್ರೋಗ ತಜ್ಞ , ವೈದ್ಯ ವಿಜ್ಞಾನಿ ಹಾಗೂ ಶಿಕ್ಷಣ ತಜ್ಞರು. ಅವರ ಬಾಲ್ಯ, ವಿದ್ಯಾಭ್ಯಾಸ, ವೃತ್ತಿ ಬದುಕು , ಸಂಶೋಧನೆಗಳು , ಅವರ ಭಾಷಣಗಳ ತುಣುಕುಗಳು, ಹಿತನುಡಿಗಳು, ಅವರು ಬರೆದ ಕೃತಿಗಳು, ಲೇಖಕರು ಹೆಗ್ಡೆಯವರೊಂದಿಗೆ ನಡೆಸಿದ ಸಂದರ್ಶನ , ವಿವಿಧ ಸಂದರ್ಭಗಳಲ್ಲಿ ಸೆರೆಹಿಡಿದ ಛಾಯಾಚಿತ್ರಗಳು ...ಹೀಗೆ , ಅವರ ಜೀವನದ ಎಲ್ಲಾ ಪ್ರಮುಖ ಅಂಶಗಳನ್ನೊಳಗೊಂಡ ವ್ಯಕ್ತಿ ಚಿತ್ರಣವನ್ನು ಕಲಾ ಭಾಗ್ವತ್ ಅವರು ವಿಷದವಾಗಿ , ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಡಾ. ವ್ಯಾಸರಾವ್ ನಿಂಜೂರ್ ಅವರ ಬೆನ್ನುಡಿ, ಡಾ. ಜಿ. ಎನ್ ಉಪಾಧ್ಯರ ಮುನ್ನುಡಿ, ಡಾ . ವೀರೇಂದ್ರ ಹೆಗ್ಗಡೆ ಹಾಗೂ ಡಾ. ಅಶ್ವಥ್ ನಾರಾಯಣ ಸಿ.ಎನ್ ಅವರ ಆಶಯನುಡಿಗಳಿರುವ ಈ ಕೃತಿ ಡಾ. ಬಿ .ಎಂ. ಹೆಗ್ಡೆಯವರ ಜೀವನ ಸಾಧನೆಯ ಸಮಗ್ರ ಚಿತ್ರಣವನ್ನು ಒದಗಿಸುತ್ತದೆ.

About the Author

ಕಲಾ ಭಾಗ್ವತ್

ಮುಂಬೈನ ಉದಯೋನ್ಮುಖ ಪ್ರತಿಭಾವಂತ ಲೇಖಕರಲ್ಲಿ ಕಲಾ ಚಿದಾನಂದ ಭಾಗ್ವತ್ ಅವರದು ಎದ್ದು ಕಾಣುವ ಹೆಸರು. ಮೂಲತಃ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಹಳದೀಪುರದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಅವರು ಉತ್ಕಟ ಸಾಹಿತ್ಯಾಭಿಮಾನಿ. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ. ಎ ಪದವಿ ಪಡೆದಿರುವ ಕಲಾ ಅವರು ಗಮಕ, ಸಂಗೀತ ಕ್ಷೇತ್ರದಲ್ಲೂ ಹಿಡಿತ ಸಾಧಿಸಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಕವಿತೆ, ಕತೆ, ಬಿಡಿ ಬರಹಗಳು ಬೆಳಕು ಕಂಡಿವೆ.ʻವೈದ್ಯ ಭೂಷಣ ಡಾ. ಬಿ.ಎಂ ಹೆಗ್ಡೆ' ಇದು ಕಲಾ ಭಾಗ್ವತ್ ಅವರ ಚೊಚ್ಚಲ ಕೃತಿ ...

READ MORE

Related Books