ಬದುಕು ಕಟ್ಟಿದ ಬಗೆಗಳು

Author : ಬಿ.ಎ. ವಿವೇಕ ರೈ

Pages 312

₹ 350.00




Year of Publication: 2024
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

'ಬದುಕು ಕಟ್ಟಿದ ಬಗೆಗಳು' ಬಿ.ಎ.ವಿವೇಕ ರೈ ಅವರ 39 ಬರಹಗಳ ಸಂಕಲನ. ಇವುಗಳಲ್ಲಿ ಬಹುಪಾಲು ಪತ್ರಿಕೆಗಳಲ್ಲಿ, ಸಂಪುಟಗಳಲ್ಲಿ ಪ್ರಕಟವಾಗಿವೆ. ಹಾಗೆಯೇ ಇಲ್ಲಿ ಲೇಖಕರ ಕೆಲವು ಉಪನ್ಯಾಸಗಳನ್ನು ಬರಹ ರೂಪದಲ್ಲಿಯೂ ಸೇರಿಸಲಾಗಿದೆ. ಇಲ್ಲಿನ ಲೇಖನಗಳನ್ನು ಸ್ಥೂಲವಾಗಿ 'ಭಾಷೆ-ಸಾಹಿತ್ಯ-ಸಂಸ್ಕೃತಿ' ಮತ್ತು 'ಅಗಲಿದವರ ನೆನವರಿಕೆ' ಎಂದು ಎರಡು ವಿಭಾಗ ಮಾಡಿಕೊಳ್ಳಲಾಗಿದೆ. ಇನ್ನು ಈ ಕೃತಿಯ ಕುರಿತು ಲೇಖಕರು ಹೀಗೆ ಹೇಳಿದ್ದಾರೆ; ಇಲ್ಲಿನ ಎಲ್ಲ ಲೇಖನಗಳ ಒಳಗೆ ಅಂತರ್ಗತವಾದ ನನ್ನ ಚಿಂತನಾಕ್ರಮದಲ್ಲಿ ಸಾಮ್ಯಗಳಿವೆ. ಅಧ್ಯಯನ ಮತ್ತು ಅನುಭವಗಳನ್ನು ಒಟ್ಟಿಗೆ ಇಟ್ಟುಕೊಂಡು ಬದುಕಿದ ನನಗೆ ಭಾಷೆ ಸಾಹಿತ್ಯ ಸಂಸ್ಕೃತಿ ಮತ್ತು ಜನರನ್ನು ಬೇರೆಬೇರೆಯಾಗಿ ನೋಡಲು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಇಲ್ಲಿನ ಬಹುತೇಕ ಲೇಖನಗಳಲ್ಲಿ 'ನಾನು' ಎಂಬ ಸರ್ವನಾಮ ಬಳಕೆಯಾಗಿದೆ. ನನ್ನ ಅನುಭವಕ್ಕೆ ಬಾರದ ಯಾವುದರ ಬಗ್ಗೆಯೂ ಯಾರ ಬಗ್ಗೆಯೂ ಬರೆಯಲು ನನಗೆ ಸಾಧ್ಯ ಇಲ್ಲ. 'ಬದುಕು ಕಟ್ಟಿದ ಬಗೆಗಳು' ಎನ್ನುವ ಪದಪುಂಜ ಇಲ್ಲಿನ ಬರಹಗಳಲ್ಲಿ ಪ್ರಸ್ತಾವಿತವಾದ ವ್ಯಕ್ತಿಗಳಿಗೆ ಅನ್ವಯ ಆಗುವಷ್ಟೇ ನನಗೂ ಅನ್ವಯ ಆಗುತ್ತದೆ. ನನಗೆ ಬದುಕಿನಲ್ಲಿ ದೊರೆತ ಅವಕಾಶಗಳು, ವ್ಯಕ್ತಿಗಳ ಸಂಸರ್ಗಗಳು ಅಪಾರ, ಅಸಾಮಾನ್ಯ ಮತ್ತು ಆಕಸ್ಮಿಕ. ಅವುಗಳ ದಾಖಲೆಗಳ ತುಣುಕುಗಳು ಇಲ್ಲಿ ಬರಹಗಳ ರೂಪದಲ್ಲಿ ಒಟ್ಟು ಸೇರಿವೆ.

About the Author

ಬಿ.ಎ. ವಿವೇಕ ರೈ
(08 December 1946)

ಡಾ. ಬಿ.ಎ.ವಿವೇಕ ರೈ ಸಂಸ್ಕೃತಿ ಚಿಂತಕರು. ಕನ್ನಡ-ತುಳು ಭಾಷೆಯ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು. ಅವರ ಹುಟ್ಟೂರು ಪುತ್ತೂರು ತಾಲೂಕಿನ 'ಪುಣಚಾ'. (ಜನನ: 1946ರ ಡಿಸೆಂಬರ್ 8ರಂದು), ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಮತ್ತೂರಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರಕೇಂದ್ರ ದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.  ಕನ್ನಡ ಮತ್ತು ತುಳು ಭಾಷೆಯ ಬಗ್ಗೆ ಅಪಾರ ಒಲವು-ಪಾಂಡಿತ್ಯ ಉಳ್ಳವರು. ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸಿದ ವಿದ್ವಾಂಸರು. ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ...

READ MORE

Related Books