ಸರಸ ಸಾಹಿತ್ಯ ವರದೇವತೆ

Author : ಸುನೀತ ಬಿ.ವಿ

Pages 120

₹ 120.00




Year of Publication: 2021
Published by: ಕಾವ್ಯಕಲಾ ಪ್ರಕಾಶನ
Address: #1273, 7 ನೇ ಕ್ರಾಸ್, ಚಂದ್ರಾ ಲೇಔಟ್, ವಿಜಯನಗರ, ಬೆಂಗಳೂರು-40 .
Phone: 9964124831

Synopsys

ಡಾ. ಸುನೀತ ಬಿ.ವಿ ಅವರ ’ಸರಸ ಸಾಹಿತ್ಯ ವರದೇವತೆ’ ಕೃತಿಯು ಸಂಚಿ ಹೊನ್ನಮ್ಮನ ಹದಿಬದೆಯ ಧರ್ಮದ ಕುರಿತಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಡಾ.ಬಿ. ಪ್ರಹ್ಲಾದರೆಡ್ಡಿ ಅವರು, ಲೇಖಕಿ ಆಧುನಿಕ ಕಾಲಕ್ಕೆ ನಿಂತು ಆಲೋಚಿಸುತ್ತಾ ಭವಿಷ್ಯದ ದಿನಗಳ ಕಡೆ ಮುಖ ಮಾಡಿ ನಿಲ್ಲುತ್ತಾರೆ. ಹೊನ್ನಮ್ಮನ ಪರಿಸರದಲ್ಲಿದ್ದ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಜೊತೆ ಜೊತೆಗೆ ಹೊನ್ನಮ್ಮನ ಚಿಂತನಾ ಕ್ರಮಗಳನ್ನು ತೆರೆದಿಡುವ ಲೇಖಕಿ ವಾಸ್ತವದ ನೆಲೆಯಲ್ಲಿ ವಿಮರ್ಶಿಸುವ ಕೆಲಸವನ್ನು ಮಾಡಿದ್ದಾರೆ. ಪತಿಧರ್ಮ, ಪಾತಿವ್ರತ್ಯ , ಪತಿಯೇ ಪರದೈವ ಎಂಬ ಪಾರಂಪರಿಕ ನಿಯಮಗಳ ಹೇರಿಕೆಗಳನ್ನು ಹೊನ್ನಮ್ಮ ಒಪ್ಪಿಕೊಂಡರೂ ಸ್ತ್ರೀ ಪರವಾಗಿ ನಿಂತು “ ಕುಮಾರದೊಡೆ ಬಂದ ಗುಣವೇನಂದರಿಂದ ಕುಮಾರಿಯಾದೊಡೆ ಕುಂದೇನು? ಎಂದು ಪ್ರಶ್ನಿಸದೆ ಬಿಡುವುದಿಲ್ಲ. “ ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣೂ ಕಾಣದ ಗಾವಿಲರು” ಎಂಬ ಹೊನ್ನಮ್ಮನ ನುಡಿಯಂತೂ ಪುರುಷ ಸಮಾಜಕ್ಕೆ ಎಸೆದ ಕೂರಲಗೇ ಸರಿ. ಸುಮಾರು ಒಂಬತ್ತು ಅಧ್ಯಾಯಗಳ ಈ ಕೃತಿಯನ್ನು ಕೂಲಂಕಷವಾಗಿ ಪರಿಶೀಲಿಸಿರುವ ಲೇಖಕಿ ನಿರ್ಣಯಗಳನ್ನು ಓದುಗರಿಗೆ ನೀಡುತ್ತಾರೆ. ಎಲ್ಲಿಯೂ ಸಿದ್ಧ ಹೇಳಿಕೆಗೆ ಮೋರೆ ಹೋಗುವುದಿಲ್ಲ. ಲೇಖಕಿಯ ಗಂಭೀರ ಬರವಣಿಗೆ ಹಾಗೂ ಆಲೋಚನಾ ಕ್ರಮಗಳು ಈ ಕೃತಿಯಲ್ಲಿ ಗಮನ ಸೆಳೆಯುವ ಅಂಶಗಳಾಗಿವೆ. ಹೊನ್ನಮ್ಮನ ಈ ಕೃತಿಯನ್ನು ಸಮಗ್ರವಾಗಿ ವಿಶ್ಲೇಷಿಸುವ ಕೆಲಸ ಲೇಖಕಿಯಿಂದಾಗಿದೆ ' ಎಂದು ಪ್ರಶಂಸಿಸಿದ್ದಾರೆ. 

About the Author

ಸುನೀತ ಬಿ.ವಿ
(04 July 1978)

ಡಾ ಸುನೀತ ಬಿ.ವಿ  ಅವರು ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬಗಳಹಳ್ಳಿ ಗ್ರಾಮದವರು. ಪ್ರಸ್ತುತ ಎಲೆಕ್ಟ್ರಾನಿಕ್ ಸಿಟಿಯ ಚಂದಾಪುರದಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಪ್ರಾಧ್ಯಾಪಕರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು; ಕಂಬಾಲ್ಪಲ್ಲಿ ಕಿಚ್ಚು, ಕ್ರಾಂತಿಯ ರೆಕ್ಕೆ ಬಿರಿದಾಗ, ಸಂಯುಕ್ತ ನಿಧಿ, ವಿಶ್ವಣ್ಣ, ಕದಳಿ, ಕಸ್ತೂರಿ, ಸಂಪ್ರದಾಯ ಮತ್ತು ವಿಮೋಚನೆ ಹಾಗೂ ಸರಸ ಸಾಹಿತ್ಯ ವರದೇವತೆ ...

READ MORE

Related Books