ಆಗಸ್ಟ್ ಮಾಸದ ರಾಜಕೀಯ ಕಥನ

Author : ಪಲ್ಲವಿ ಇಡೂರ್

Pages 188

₹ 230.00




Year of Publication: 2021
Published by: ಕಾನ್ಕೆವ್ ಮೀಡಿಯಾ ಆಂಡ್ ಪಬ್ಲಿಷರ್
Address: ಬೆಂಗಳೂರು
Phone: 9902590303

Synopsys

‘ಆಗಸ್ಟ್ ಮಾಸದ ರಾಜಕೀಯ ಕಥನ’ ಕೃತಿಯು ಲೇಖಕಿ ಪಲ್ಲವಿ ಇಡೂರು ಅವರ ಲೇಖನಗಳ ಸಂಕಲನವಾಗಿದೆ. ಕೃತಿಯ ಕುರಿತು ಲೇಖಕಿ ‘ಕನ್ನಡ ಪುಸ್ತಕ ಲೋಕದಲ್ಲಿ ಓದಲು ಸಿಗುವ ವಿಷಯಗಳು ಹಲವಾರು. ಆದರೆ ಭಾರತದ ಮಟ್ಟಿಗೆ ಎಂದೂ ಮರೆಯಲಾಗದ, ಯಾವತ್ತೂ ಕಡೆಗಣಿಸಲಾಗದ ಸ್ವಾತಂತ್ರ್ಯ ಹೋರಾಟ ಮತ್ತು ದೇಶ ವಿಭಜನೆಯ ವಿಚಾರದ ರಾಜಕೀಯ ಆಯಾಮಗಳು ಇದುವರೆಗೂ ಪ್ರಕಟವಾಗಿಲ್ಲ ಮತ್ತು ಚರ್ಚೆಯೂ ಆಗದ ವಿಚಾರವಾಗಿದೆ. ಈ ಕುರಿತು ವಸ್ತುನಿಷ್ಟ ಬರಹವೊಂದರ ಅಗತ್ಯ ಮನಗಂಡು ಕನ್ನಡದ ಓದುಗರಿಗೆ ಅದನ್ನು ತಲುಪಿಸುವ ಜವಾಬ್ದಾರಿಯೊಂದಿಗೆ ಪ್ರಕಟಗೊಂಡಿರುವ ಪುಸ್ತಕ 'ಆಗಸ್ಟ್ - ಮಾಸದ ರಾಜಕೀಯ ಕಥನ'. ಇದು ದೇಶ ವಿದೇಶಗಳಿಂದ ಪುಸ್ತಕಗಳನ್ನು ತರಿಸಿ, ಮಾಹಿತಿಗಳನ್ನು ಕಲೆ ಹಾಕಿ ಸ್ಪಷ್ಟ ವಿಚಾರಗಳೊಂದಿಗೆ ಬರೆದ ಪುಸ್ತಕವಾಗಿದ್ದು ಸ್ವಾತಂತ್ರ್ಯ ಮತ್ತು ದೇಶ ವಿಭಜನೆಯ ಸಂದರ್ಭದ ರಾಜಕೀಯವನ್ನು ಬಹಳ ಆಪ್ತವಾಗಿ ಕಟ್ಟಿಕೊಡಲಾಗಿದೆ’ ಎಂದಿದ್ದಾರೆ.

About the Author

ಪಲ್ಲವಿ ಇಡೂರ್

ಪಲ್ಲವಿ ಇಡೂರ್ ಮೂಲತಃ ಕುಂದಾಪುರ ತಾಲೂಕಿನ ಉಪ್ಪುಂದವೆಂಬ ಕಡಲತಡಿಯ ಊರಿನವರು. ಶಿಕ್ಷಕ ದಂಪತಿಯ ಮಗಳಾದ ಪಲ್ಲವಿ ಅವರು ಓದಿದ್ದು ಅಪ್ಪ ಅಮ್ಮ ಕೆಲಸ ಮಾಡುತ್ತಿದ್ದ ಸರಕಾರಿ ಶಾಲೆಯಲ್ಲಿ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಂಗಳೂರಿಗೆ ತೆರಳಿದ ಅವರ ಹಾಸ್ಟೆಲ್ ಜೀವನ, ಒಂಟಿತನಕ್ಕೆ ಸಂಗಾತಿಯಾಗಿದ್ದು ಪುಸ್ತಕ ಮತ್ತು ಸಂಗೀತ. ಓದಿದ್ದು ಕಂಪ್ಯೂಟರ್ ಸೈನ್ಸ್ ನಲ್ಲಿ  ಡಿಪ್ಲೋಮಾ ಎಂಜಿನಿಯರಿಂಗ್. ಆನಂತರ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಡಿಪ್ಲೋಮಾ ಪಡೆದು ಕೆಲವರ್ಷ ಪ್ರತಿಷ್ಠಿತ ಐಟಿ ಕಂಪೆನಿಗಳಲ್ಲಿ ಕೆಲಸ. ಪತಿ ಮತ್ತು ಒಬ್ಬ ಮಗನ ಪುಟ್ಟ ಕುಟುಂಬ. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತೊರೆದು ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡಿದ್ದು, ...

READ MORE

Related Books