ಆರು ದಶಕದ ಆಯ್ದ ಬರಹಗಳು

Author : ಯು.ಆರ್. ಅನಂತಮೂರ್ತಿ

Pages 688

₹ 450.00




Year of Publication: 2012
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
Phone: 26617100, 26617755

Synopsys

ಅನಂತಮೂರ್ತಿ ಅವರು ಕಳೆದ ಆರು ದಶಕದ ಅವಧಿಯಲ್ಲಿ ಬರೆದ ಲೇಖನ ಆಯ್ದ ಬರಹಗಳನ್ನು ಈ ಸಂಕಲನ ಒಳಗೊಂಡಿದೆ. ಅನಂತಮೂರ್ತಿ ಅವರ ವಿಮರ್ಶಾ ಬರೆಗಳ ಪ್ರಾತಿನಿಧಿಕ ಸಂಕಲನದ ಹಾಗಿದೆ. ಈ ಪುಸ್ತಕದ ಬೆನ್ನುಡಿಯಲ್ಲಿ ವಿಮರ್ಶಕಿ ಎಂ.ಎಸ್. ಆಶಾದೇವಿ ಅವರು ಹೀಗೆ ಬರೆದಿದ್ದಾರೆ.

ಕಥೆಯೊಂದರಲ್ಲಿ ಅನಂತಮೂರ್ತಿ 'ಮನುಷ್ಯನ ಮನಸ್ಸಿಗಿರುವ ದ್ರೋಹದ ಸಾಧ್ಯತೆ ಅಗಾಧವಾದದ್ದು' ಎನ್ನುತ್ತಾರೆ. ಈ ಹೇಳಿಕೆ ಅವರ ಇಡೀ ನೈತಿಕತೆಯ ಹುಡುಕಾಟದ ತೀವ್ರತೆ, ಆತಂಕ, ಆರ್ತತೆ ಮತ್ತು ಪ್ರಾಮಾಣಿಕತೆಯನ್ನೆಲ್ಲ ಹಿಡಿದಿಡುತ್ತದೆ. ಒಂದು ಬೀಸಿನಲ್ಲಿ ಅನಂತಮೂರ್ತಿಯವರ ಬರೆವಣಿಗೆಯ ಮೂಲಕೇಂದ್ರ ಯಾವುದೆಂದು ಕೇಳಿದರೆ ಕೊಡಬಹುದಾದ ಒಂದು ಮಾತಿನ ಉತ್ತರವಾಗಿಯೂ ಇದು ಕಾಣಿಸುತ್ತದೆ. ಬದುಕಿನ ದುರ್ದಮ್ಯತೆಯಲ್ಲಿ, ಸನ್ನಿವೇಶಗಳ ಅನಿವಾರ್ಯತೆಯಲ್ಲಿ ಬದಲಾಗುತ್ತಿರುವ ಆಯ್ಕೆ ಮತ್ತು ಆದ್ಯತೆಗಳಲ್ಲಿ, ಲೋಕಕ್ಕಿರಲಿ ತನಗೆ ತಾನೇ ಮಾಡಿಕೊಳ್ಳುವ ಆತ್ಮವಂಚನೆಯಲ್ಲಿ ನೈತಿಕತೆಯ ಹುಡುಕಾಟವೆನ್ನುವುದು, ಅದನ್ನು ಕುರಿತ ಬದ್ದತೆಯೆನ್ನುವುದು ಎಂಥ ತಳಮಳಗಳನ್ನು ವ್ಯಕ್ತಿಯ ಮತ್ತು ಸಮುದಾಯದ ಬದುಕಿನಲ್ಲಿ ಸೃಷ್ಟಿಸುತ್ತದೆ ಎನ್ನುವುದನ್ನು ಇವರಷ್ಟು ನಿಜದ ಮತ್ತು ಬಹುಮುಖಿ ನೆಲೆಯಲ್ಲಿ ಹಿಡಿದವರು ಕನ್ನಡದಲ್ಲಿ ಕಡಿಮೆಯೇ. ಇವರ ಬರವಣಿಗೆಯ ಶಕ್ತಿ ಇರುವುದು ಸನ್ನಿವೇಶಗಳ ಒಳಪೊಗುವ ಕ್ರಿಯೆಯಲ್ಲಿ ಮಾತ್ರವಲ್ಲ ಪೊರಮಡಲು ನಡೆಸುವ ಪ್ರಯತ್ನ ಮತ್ತು ಪಡೆಯುವ ಯಶಸ್ಸಿನಲ್ಲಿ.

ಅನಂತಮೂರ್ತಿಯವರು ಉದ್ದಕ್ಕೂ ತಮ್ಮನ್ನು ಸಮುದಾಯದೊಂದಿಗೆ ಲಯಗೊಳಿಸಿಕೊಳ್ಳಲು ಅಥವಾ ಸಮುದಾಯವನ್ನು ಆವಾಹಿಸಿಕೊಳ್ಳಲು ಸತತವೆನ್ನುವ ಪ್ರಯತ್ನ ನಡೆಸಿರುವವರು, ಸಮುದಾಯವನ್ನು ಹೊರಗಿನಿಂದ ನೋಡುವುದರಲ್ಲಿ ಅವರಿಗೆ ಯಾವ ಆಸಕ್ತಿಯೂ ಇಲ್ಲ. ಅವರಿಗೆ ಪ್ರಿಯವಾದ ಪರಿಕಲ್ಪನೆಯೊಂದರಲ್ಲಿ ಹೇಳುವುದಾದರೆ 'ಕ್ರಿಟಿಕಲ್‌ ಇನ್‌ಸೈಡರ್' ಆಗುವುದರಲ್ಲಿ ಅವರಿಗೆ ನಂಬಿಕೆ. ದೇಶ-ಕಾಲಗಳ ಸುವಿಶಾಲ ಹರಹಿನಲ್ಲಿ ವ್ಯಕ್ತಿ ಮತ್ತು ಸಮಾಜದ ಅವಸ್ಥಾಂತರಗಳನ್ನು, ಒಳ-ಹೊರಗುಗಳನ್ನು, ತಾತ್ವಿಕ ರಾಜಕೀಯ ಪ್ರಶ್ನೆಗಳನ್ನು ಖಾಸಗೀ ಸಂಬಂಧಗಳಷ್ಟೇ ತೀವ್ರತೆಯಲ್ಲಿ, ಅನುಭಾವದ ಉತ್ಕಟತೆಯಲ್ಲಿ ಹಿಡಿಯುವ ಅನಂತಮೂರ್ತಿಯವರದು ನಮ್ಮ ಕಾಲದ ಆದ್ಯ ಜೀವನ್ಮುಖಿ ವ್ಯಕ್ತಿತ್ವ.

 

About the Author

ಯು.ಆರ್. ಅನಂತಮೂರ್ತಿ
(21 December 1932 - 22 August 2014)

ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...

READ MORE

Related Books