ಹದಿನೆಂಟು

Author : ಪಿ.ವಿ. ಭಂಡಾರಿ

Pages 208

₹ 180.00




Year of Publication: 2019
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 8026607011

Synopsys

‘ಹದಿನೆಂಟು’ ಲೇಖಕ ಪಿ.ವಿ. ಭಂಡಾರಿ ಮತ್ತು ಹರೀಶ್ ಶೆಟ್ಟಿ ಬಂಡ್ಸಾಲೆ ರಚಿಸಿರುವ ಲೇಖನಗಳ ಸಂಕಲನ. ಈ ಕೃತಿಗೆ ಲೇಖಕ ಮತ್ತು ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅವರು ಬೆನ್ನುಡಿ ಬರೆದಿದ್ದಾರೆ. ಇಲ್ಲಿಯ ಲೇಖನಗಳು ಯುವಜನರ ಸಮಸ್ಯೆಗಳತ್ತ ಬೆಳಕು ಚೆಲ್ಲುತ್ತವೆ. ಯುವಜನರ-ಶಕ್ತಿ-ಸಾಮರ್ಥ್ಯದ ಸಾಧ್ಯತೆಗಳು, ಅವರನ್ನು ಕಾಡುವ ಸಮಸ್ಯೆಗಳು, ಗೊತ್ತಿರಲೇಬೇಕಾದ ವಿಷಯಗಳು, ಅವುಗಳನ್ನು ತಿಳಿಸದಿದ್ದರೆ ಆಗುವ ಆನಾಹುತಗಳನ್ನು ಕುರಿತು ವಿವರವಾಗಿ ತಿಳಿ ಹೇಳುವ ಮನೋವೈಜ್ಞಾನಿಕ ಪುಸ್ತಕಗಳು ಕನ್ನಡದಲ್ಲಿ ವಿರಳ. ಅಂತಹ ಅಪರೂಪದ ಪುಸ್ತಕಗಳ ಸಾಲಿಗೆ  ಕೃತಿ ‘ಹದಿನೆಂಟು’ ಸೇರುತ್ತದೆ.

About the Author

ಪಿ.ವಿ. ಭಂಡಾರಿ

ಡಾ. ಪಿ.ವಿ. ಭಂಡಾರಿ ವೈದ್ಯರು. ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾನಿಲಯದಲ್ಲಿ ಎಂ.ಬಿ.ಬಿ.ಎಸ್, ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಮನೋವೈಜ್ಞಾನಿಕ ಚಿಕಿತ್ಸೆಯಲ್ಲಿ ಡಿಪ್ಲೊಮಾ, ಮಂಗಳೂರಿನ ಫಾ. ಮುಲ್ಲರ್ಸ್ ವೈದ್ಯಕೀಯ ಮಹಾ ವಿದ್ಯಾನಿಲಯದಿಂದ ಡಿ.ಎನ್.ಬಿ (ಮನೋವೈಜ್ಞಾನಿಕ ಚಿಕಿತ್ಸೆ) ಪದವಿ ಪಡೆದರು. ತಾಲ್ಲೂಕು ಕನ್ನಡ ಸಾಹಿತ್ಯ ಪ್ರಶಸ್ತಿ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಡಾ. ಎಸ್.ಎಸ್. ಜಯರಾಂ ಪ್ರಶಸ್ತಿ, ಸ್ಪಂದನ ಪ್ರಶಸ್ತಿ, ಶ್ರೇಷ್ಠ ಮನೋವೈದ್ಯ-2012 ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡುವ 2012ರ ಸಂಯಮ ಪ್ರಶಸ್ತಿಗಳು ಸಂದಿವೆ. ಕಳೆದ 15 ವರ್ಷಗಳಿಂದ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ತಜ್ಞ ಮನೋವೈದ್ಯ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಪನ್ಯಾಸಗಳ ಮೂಲಕವೂ ಸ್ವಸ್ಥ ಜೀವನಕ್ಕಾಗಿ ...

READ MORE

Related Books