ಲೇಖಕ ಡಾ. ಚಿ.ಸಿ.ನಿಂಗಣ್ಣ ಅವರ ಕೃತಿ-ಕಲಬುರ್ಗಿ ಜಿಲ್ಲೆಯ ಜಾತ್ರೆಗಳು. ಅವಿಭಜಿತ ಕಲಬುರ್ಗಿ ಜಿಲ್ಲೆಯ ಜಾತ್ರೆಗಳು ಕುರಿತು ಲೇಖಕರ ಮಹಾಪ್ರಬಂಧವಿದು. ಕಲಬುರಗಿ ಜಿಲ್ಲೆಯ ಜನಪದ ಸಂಸ್ಕೃತಿಯನ್ನು ಅನಾವರಣ ಗೊಳಿಸಲಾಗಿದೆ. ಜಾತ್ರೆಗಳಲ್ಲಿ ಜಾನಪದ ಬದುಕಿನ ಆಚರಣೆಗಳು ಅನಾವರಣಗೊಂಡಿರುತ್ತವೆ. ಜಾತ್ರೆಗಳು ಜನಪದರ ಬಹು ಉಪಯುಕ್ತ ಸಂಸ್ಥೆಯಾಗಿ ಬೆಳೆದು ಬಂದಿವೆ. ಜಾತ್ರೆಗಳು ಜಾನಪದ ಕಲೆ, ಸಂಸ್ಕೃತಿ, ಆಚರಣೆ, ಸಾಹಿತ್ಯ, ಸಂಗೀತ, ಮನರಂಜನೆ, ಸಾಹಸಗಳ ಪ್ರದರ್ಶನಕ್ಕೆ ಉತ್ತಮ ವೇದಿಕೆ ಒದಗಿಸುತ್ತದೆ. ಗ್ರಾಮೀಣ ಜನರ ಸಾಮಾಜಿಕ-ಆರ್ಥಿಕ ಪರಿವರ್ತನೆಯಲ್ಲೂ, ಭಾವೈಕ್ಯತೆಯನ್ನು ಮೆರೆಯುವಲ್ಲಿಯೂ ಈ ಜಾತ್ರೆಗಳು ಬಹುಮುಖಿಯಾಗಿ ಪಾತ್ರವನ್ನು ನಿರ್ವಹಿಸುತ್ತವೆ. ಇಂತಹ ವಿಷಯಗಳ ಮೇಲೆ ಸುದೀರ್ಘವಾಗಿ ಚರ್ಚಿಸಿದ ಗ್ರಂಥವಿದು.
©2024 Book Brahma Private Limited.