ದಡ ಮಧುರಾ ಕರ್ಣಮ್ ಅವರ ಕಥಾಸಂಕಾಲನವಾಗಿದೆ. ಅಕ್ಷರ, ಉದ್ಯೋಗ, ಸಾಮಾಜಿಕ ಅರಿವು ಬದಲಾವಣೆ, ಹೊಸ ಕಾಲದ ಸ್ತ್ರೀ ವಾದ ಅದರಾಚೆ ಮಿಡಿವ ಹತಾಶೆ, ನೋವು ಅನುಭವಿಸುವ ಪಾತ್ರಗಳು 'ದಡ' ಕಥಾ ಸಂಕಲನದಲ್ಲಿವೆ. ಒಂದು ರೀತಿಯಲ್ಲಿ ಹೆಣ್ಣು ಸಂಕಟದ ಕಥಾಕುಂಡವಿದೆ. ಬದಲಾದ ಜಾಗತಿಕ ಸ್ಥಿತ್ಯಂತರಗಳಿಗೆ ಚಾಚಿಕೊಳ್ಳುವ, ಐಟಿ.ಬಿಟಿ. ಕೊರೋನಾ ಸಂಕಷ್ಟಗಳಲ್ಲಿ ಮಧ್ಯಮ ವರ್ಗ ಅನುಭವಿಸುವ ಯಾತನೆಗಳು ಕೂಡಾ ಇಲ್ಲಿನ ಕಥೆಗಳಲ್ಲಿ ಮುಖ ಪಡೆದಿವೆ. ಒಟ್ಟು ಇವುಗಳಂತರಾಳದಲ್ಲಿ ಒಂದೇನೋ ಹುಡುಕಾಟವಿದೆ. ಹಳತನ್ನು ಕಳಚಿಕೊಳ್ಳದೆ, ಹೊಸದನ್ನು ಅಪ್ಪಿಕೊಳ್ಳಲಾಗದ 'ಥರ್ಡ್ ಅಂಪಾಯರ್' ಗೊಂದಲದ ಪರಸ್ಥಿತಿಯವು. 'ದಡ' ಕಥಾ ಸಂಕಲನ ಸೇರಿ ಮಧುರಾರ ಮೂರು ಕಥಾಸಂಕಲನಗಳನ್ನು ಓದಿದ ನಾನು, ಲೇಖಕಿ ಒಂದಿಷ್ಟು ದೂರ ಸಾಗಿದ್ದಾರೆ ಎಂದು ಅನ್ನಿಸದೆ ಇರಲಿಲ್ಲ. ವಸ್ತು ವಿವೇಚನೆ, ಶೈಲಿ ವಿಧಾನದಲ್ಲಿ ಬದಲಾವಣೆಗಳನ್ನು ಕಾಣುವ ಫ್ಲ್ಯಾಶ್ ಬ್ಯಾಕ್ ತಂತ್ರವೇ ಬಹುತೇಕ ಕಥೆಗಳಲ್ಲಿವೆ.
©2024 Book Brahma Private Limited.