ವಿದುರನಗರಿ

Author : ಎಂ.ಜಿ. ದೇಶಪಾಂಡೆ

Pages 116

₹ 80.00




Year of Publication: 2010
Published by: ಶ್ರೀಹರಿ ಪ್ರಕಾಶನ
Address: # 15-03-102, ಲಕ್ಷ್ಮಿ ನಿಲಯ, ರಾಂಪೂರೆ ಕಾಲೊನಿ, ಮನ್ನಳ್ಳಿ ರಸ್ತೆ, ಬೀದರ-585403
Phone: 8971067233

Synopsys

ಹಿರಿಯ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರ ಕೃತಿ-ವಿದುರ ನಗರಿ. ಬೀದರ್ ಜಿಲ್ಲೆಯ ಸಮಗ್ರ ಮಾಹಿತಿಯನ್ನುಒದಗಿಸುವ ಕೃತಿ ಇದು. ಈ ಜಿಲ್ಲೆಗೆ "ಬೀದರ್" ಎಂದು ಹೆಸರು ಹೇಗೆ ಬಂತು ಅದರ ವಿಶ್ಲೇಷಣೆ ನೀಡಲಾಗಿದೆ .ಬೀದರ್ ಜಿಲ್ಲೆಯ ಸಮಗ್ರ ಮಾಹಿತಿ ಗಳನ್ನೊಳಗೊಂಡ ಲೇಖನವಿದ್ದು, ಕೋಟೆ ಪ್ರೇಕ್ಷಣೀಯ ಚಿತ್ರ ಸಹಿತ ಸ್ಥಳಗಳು, ತಾಲ್ಲೂಕುಗಳ ಮಾಹಿತಿ, ಜನಸಂಖ್ಯೆ, ಭೂ-ವಿಸ್ತೀರ್ಣ ಮುಂತಾದ ವಿವರಗಳು ಇಲ್ಲಿವೆ. ಬೀದರಿನ ಖ್ಯಾತ ಬಿದರಿ ಕಲೆ ಮತ್ತು ಮಾಜಿ ಸಂಸದ ರಾಮಚಂದ್ರ ವೀರಪ್ಪನವರ ವ್ಯಕ್ತಿಚಿತ್ರ, ಬೀದರ್ ಪರಂಪರೆ ಮುಂತಾದ ವಿಷಯಗಳು ಬೆಳಗಿವೆ. ಬೀದರ್ ಜಿಲ್ಲೆಯ ತಿನಿಸು ವೈಭವ, ಜಿಲ್ಲಾಧಿಕಾರಿ ಹರ್ಷಗುಪ್ತರ ವ್ಯಕ್ತಿತ್ವ ಚರಿತೆ, ಜೊತೆಗೆ, ಬೀದರ್ ಜಿಲ್ಲೆಯ ಕವಿಗಳು ಮತ್ತು ಸಾಹಿತಿಗಳ ಕುರಿತ ವಿವರವಾದ ಲೇಖನಗಳನ್ನು ಒಳಗೊಂಡಿವೆ.

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books