ಕನ್ನಡ ಸಾಹಿತ್ಯದಲ್ಲಿ ಮುಸ್ಲಿಮ್ ಸವೇದನೆ ಉದಿನೂರು ಮುಹಮ್ಮದ್ ಕುಂಞ ಅವರ ಕೃತಿಯಾಗಿದೆ . ಈ ಕೃತಿಯಲ್ಲಿ ಒಟ್ಟು 47 ಮುಸಲ್ಮಾನ ಪುರುಷ ಲೇಖಕರು ಹಾಗು 10 ಮಹಿಳಾ ಸಾಹಿತಿಗಳ ಬಗ್ಗೆ ಇಲ್ಲಿ ಬಹು ಅಮೂಲ್ಯವಾದ ಮಾಹಿತಿಯನ್ನು ನೀಡಲಾಗಿದೆ. ಪುಸ್ತಕದ ಪ್ರಾರಂಭದಲ್ಲಿ, ಇಡೀ ಇಸ್ಲಾಂ ಧರ್ಮೀಯರ ಆರ್ಥಿಕ ಸಾಮಾಜಿಕ, ಔದ್ಯೋಗಿಕ, ಸಾಹಿತ್ಯಕ/ಸಾಂಸ್ಕೃತಿಕ ಇತ್ಯಾದಿ ಕ್ಷೇತ್ರಗಳ ಇತಿಹಾಸದ ಒಂದು ಸಂಕ್ಷಿಪ್ತ ಆದರೆ ಸೂಕ್ತವಾದ ಕಿರು ಚಿತ್ರಣವನ್ನೂ ನೀಡಿದ್ದು ಓದುಗರಿಗೆ ಮುದ ನೀಡುತ್ತದೆ. ಸಾವಿರ ವರ್ಷಗಳ ಈ ಪರಂಪರೆಯನ್ನು ಕಟ್ಟಿಕೊಡುವಾಗ ಸಂದರ್ಭಾನುಸಾರ ಆಕರ ಗ್ರಂಥಗಳ ಬಗ್ಗೆ, ಅಲ್ಲಿನ ಬರಹಗಾರರ ಬಗ್ಗೆಯೂ ನಿರೂಪಿಸಿರುವ ಹೆಸರುಗಳು, ಸಂದರ್ಭಗಳು ಕೇವಲ ಊಹಾಪೋಹದಿಂದಾಗಲಿ, ವೈಭವೀಕರಿಸಬೇಕೆನ್ನುವ ಹಂಬಲದಿಂದಾಗಲಿ ಮೂಡಿ ಬಂದವುಗಳಲ್ಲ ಎಂಬುದನ್ನು ಖುಲ್ಲಂ ಖುಲ್ಲಾ ಹೇಳದೇ ಸೂಚ್ಯವಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನ ಕೃತಿಕಾರರದ್ದಾಗಿದೆ.
©2024 Book Brahma Private Limited.