ಸುಮಾರು ಇಪ್ಪತ್ತೈದು ವರ್ಷಗಳ ಹರಹಿನ ಅವರ ಭಾಷಣಗಳ ಸಂಗ್ರಹ ಇಲ್ಲಿವೆ. ಜಾನಪದ ಮತ್ತು ದೇಸಿ ಸಮ್ಮೇಳನಗಳ ಅಧ್ಯಕ್ಷ ಭಾಷಣಗಳಿಂದ ತೊಡಗಿ ಜಾನಪದ ಸಂಬಂಧಿಯಾದ ಇತರ ಹಲವು ಉಪನ್ಯಾಸಗಳು ಇಲ್ಲಿ ಒಟ್ಟು ಸೇರಿವೆ. ಇದರ ಜೊತೆಗೆ ಕನ್ನಡ ವಿಶ್ವವಿದ್ಯಾನಿಲಯ ಹಂಪಿಯಲ್ಲಿ ಅವರು ಕುಲಪತಿಯಾಗಿದ್ದ ಅವಧಿಯಲ್ಲಿ ನಡೆಸಿದ ಮೂರು ನುಡಿ ಹಬ್ಬಗಳ ಸ್ವಾತ ಭಾಷಣಗಳು, ಕನ್ನಡ ವಿಶ್ವವಿದ್ಯಾನಿಲಯದೊಳಗಿನ ಅವರ ಕೆಲಸಗಳನ್ನು ಮತ್ತು ಚಿಂತೆಗಳನ್ನು ದಾಖಲು ಮಾಡುತ್ತವೆ. ಇವುಗಳ ಜೊತೆಗೆ ಕನ್ನಡ ವಿವಿಶ್ವವಿದ್ಯಾನಿಲಯದ ಹಸ್ತಪ್ರತಿ ಸಮ್ಮೇಳನ, ದೇಸೀ ಸಮ್ಮೇಳನ ಮತ್ತು ಇತರ ವಿಚಾರಸಂಕಿರಣಗಳ ಮಾತುಗಳು ಬರಹ ರೂಪ ಪಡೆದಿವೆ. ತುಂಬ ಹಳೆಯ ಆದರ ನೆನಪಿನ ದೃಷ್ಟಿಯಿಂದ ಬಹಳ ಮಹತ್ವದ ಮಂಗಳೂರು ವಿವಿ 1988ರ ವಿಚಾರ ಸಂಕಿರಣದ ಮಾತುಗಳನ್ನೂ ಇಲ್ಲಿ ಜೋಡಿಸಲಾಗಿದೆ.
©2025 Book Brahma Private Limited.