ಡಾ. ಪ್ರಹ್ಲಾದ ಡಿ.ಎಂ ಅವರ ‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ಮಾತೃದೈವಗಳು ಮತ್ತು ಆ ಕುಲದ ಚಾರಿತ್ರಿಕ ಕಾವ್ಯಗಳನ್ನು ಕುರಿತಂತೆ ಅಧ್ಯಯನ ನಡೆಸಿದ ಕೃತಿಯಾಗಿದೆ.
ಈ ಕೃತಿಯ ಲೇಖಕರಾದ ಡಾ.ಡಿ.ಎಂ. ಪ್ರಹ್ಲಾದ್ ಅವರು ಬಹಳ ಶ್ರಮಪಟ್ಟು ಆಕರಗಳನ್ನು ಸಂಗ್ರಹಿಸಿ ಬಹಳ ತಾಳ್ಮೆಯಿಂದ ವಿಶ್ಲೇಷಿಸಿದ್ದಾರೆ. ಕುಲಮೂಲದ ಚರಿತ್ರೆ ಭಾಗದಲ್ಲಿ ಬಹಳ ಪುರಾತನವಾದ ಹಸ್ತಪ್ರತಿಯನ್ನು ಉಲ್ಲೇಖಿಸಿ ಅದರಲ್ಲಿ ವಿವರಿಸಿರುವ ತ್ರಿಮೂರ್ತಿಗಳ ಪೌರಾಣಿಕ ಪ್ರಸಂಗವನ್ನು ಮ್ಯಾಸಬೇಡರ ಕುಲಮೂಲಕ್ಕೆ ಕಾರಣವೆಂದೇ ಚರ್ಚೆಯನ್ನು ಆರಂಭಿಸಿದ್ದಾರೆ. ಮಂದರಾಜ, ಅವನ ವಿವಾಹ, ಅಂಭೋಜರಾಜ, ಶಿಶುಪಾಲ, ದಾನಸಾಲದೇವಿ, ಶುಕ್ಲಮಲ್ಲಿನಾಯಕ, ಪೆದ್ದಕ್ಕ ರಾಯಲದೇವಿ, ಸಂಚುಲಕ್ಷ್ಮೀ, ಭಾನುಕೋಟಿ ರಾಜ, ಅನೇಕ ಬೆರಗುಗಳ ಹುಟ್ಟು, ಗಾದ್ರಿಪಾಲನಾಯಕ ಮತ್ತು ಹುಲಿಗಳ ಪ್ರಸಂಗ, ಯರಮಂಚನಾಯಕನ ನಲ್ಲಮಲೈ ಪ್ರಯಾಣ, ರ‍್ರಮಲೈ ಪ್ರಯಾಣ, ವಟ್ಟಳ್ಳಿ ನಾಯಕನ ಸಂಘರ್ಷ, ಕೊಳಗಲ್ಲಬೊಮ್ಮನ ಒಪ್ಪಂದ, ದಡ್ಡಿಸೂರನಾಯಕನ ಸಂಘರ್ಷ, ಬೋರೇದೇವರ ಪ್ರತಿಷ್ಠಾಪನೆ ಮುಂತಾದ ಘಟನೆಗಳ ವಿವರವನ್ನು ಸರಳವಾಗಿ ನಿರೂಪಿಸಿದ್ದಾರೆ.
©2025 Book Brahma Private Limited.