ಭಾರತದ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯ ಮಗನಾದ ಸಂಜಯ್ ಗಾಂಧಿಯ ಕುರಿತು ಬರೆದಂತಹ ಕೃತಿ ಇದು. ಭಾರತ ಕಂಡ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಇಂದಿರಾ ಗಾಂಧಿಯವರ ಮಗ ಯಾವ ರೀತಿ ತನ್ನ ಜೀವನವನ್ನು ಮುನ್ನಡೆಸಿದ ಮತ್ತು ಆತನ ಜೀವನ ಶೈಲಿ ಸಮಾಜದ ಕೆಂಗಣ್ಣಿಗೆ ಗುರಿಯಾಗಿತ್ತು ಎನ್ನುವುದರ ಕುರಿತು ಈ ಪುಸ್ತಕ ಬರೆಯಲ್ಪಟ್ಟದೆ. ಸಂಜಯನ ಜೀವನ ಇಂದಿರಾ ಗಾಂಧಿಯವರ ರಾಜಕೀಯ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರಿತು ಎಂಬುದರ ಕುರಿತಾಗಿ ಕೂಡ ಈ ಪುಸ್ತಕ ವಿವರಿಸುತ್ತದೆ. ಅತೀ ಮುಖ್ಯವಾಗಿ ಅತ್ಯಂತ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸಂಜಯ ಅವರದು ನಿಜವಾಗಿಯೂ ಒಂದು ಅಪಘಾತವೇ ಅಥವಾ ಅದೊಂದು ಪೂರ್ವ ನಿಯೋಜಿತ ಕೊಲೆಯೇ ಎಂಬುದರ ಕುರಿತು ಹಲವು ಅಚ್ಚರಿ ಹುಟ್ಟಿಸುವ ಮಾಹಿತಿಗಳು ಲಭ್ಯವಿವೆ. ರವಿ ಬೆಳಗೆರೆಯವರ ಬರೆವಣಿಗೆ ಮತ್ತು ಪುಸ್ತಕದಲ್ಲಿರುವ ಅಪರೂಪದ ಚಿತ್ರಗಳು ಓದುಗರನ್ನು ಮತ್ತಷ್ಟು ಸೆಳೆಯುತ್ತದೆ. ಸಂಜಯನ ಜೀವನದಲ್ಲಿ ನಡೆದಂತಹ ಕೆಲವು ವಿಚಿತ್ರ ಸನ್ನಿವೇಷಗಳ ಕುರಿತಾದಂತಹ ರೋಚಕ ವಿವರಣೆ ಈ ಪುಸ್ತಕದಲ್ಲಿ ದೊರೆಯುತ್ತದೆ.
©2025 Book Brahma Private Limited.