ಬೌದ್ಧ ಧರ್ಮದ ಹಲವು ಶಾಖೆಗಳು ಭಾರತದಿಂದ ಕ್ರಮೇಣ ಚೀನಾ ಜಪಾನುಗಳಿಗೆ ವಲಸೆಹೋಗಿ ನಿಂತವು ಮತ್ತು ಅಲ್ಲಿ ಪುನಃ, ಶಾಖೆ ಉಪಶಾಖೆಗಳಾಗಿ ವಿಂಗಡನೆಗೊಂಡು ಹಬ್ಬಿಕೊಂಡವು. ಅಂಥವುಗಳಲ್ಲಿ ಪ್ರಮುಖವಾದ್ದು ಮತ್ತು ಹೆಚ್ಚು ಸ್ಥಿರವಾಗಿ ಬಾಳಿಕೊಂಡುಬಂದದ್ದು ‘ಝೆನ್’. ಇತರ ಸಾಂಪ್ರದಾಯಿಕ ಧರ್ಮಗಳಂತೆ ಝೆನ್, ತರ್ಕಶುದ್ಧವಾದ ಸುಸಂಬದ್ಧವಾದ ಬೌದ್ಧಿಕ ತತ್ವ-ಸಿದ್ಧಾಂತವಲ್ಲ. ಶಾಸ್ತ್ರ-ಶಾಸನಗಳ, ವಿಧಿ ನಿಷೇಧ ನೀತಿಗಳ ನಿಷ್ಕೃಷ್ಟ ಪ್ರಕಾರದಲ್ಲಿ ಬದ್ಧವಾದದ್ದಲ್ಲ. ಝೆನ್ ಬಗ್ಗೆ ವಿವರಣೆ ಕೊಡುವುದು ಅಸಾಧ್ಯ. ಝೆನ್‌ಗೆ ಆಧಾರಗ್ರಂಥಗಳಿಲ್ಲ. ಝೆನ್‌ನ ಪರಂಪರೆಯೆಂದರೆ ಆಗಾಗ ದಾಖಲಾಗುತ್ತ ಬಂದಿರುವ ಒಗಟು-ಮುಂಡಿಗೆ-ಸಂವಾದ-ಪ್ರಸಂಗಗಳು ಮಾತ್ರವೆ. ಇಲ್ಲಿ, ಝೆನ್‌ನ ಕೆಲವು ಕಥೆ-ಪ್ರಸಂಗ-ಸಂವಾದ-ಒಗಟು-ಮುಂಡಿಗೆಗಳನ್ನು ಆಯ್ದುಕೊಟ್ಟಿದೆ. ಇವೇ-ಝೆನ್ ಕೃತಿಯಲ್ಲಿರುವ ಮುಖ್ಯ ವಸ್ತು.
©2024 Book Brahma Private Limited.