ಜಾನಪದ ತಜ್ಞ ಶ್ರೀ ರಾಮ ಇಟ್ಟಣ್ಣವರು ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಬೂದಿಹಾಳದ ಶ್ರೀ ಫಕೀರೇಶ್ವರ ಮಠದ ಕುರಿತು ಬರೆದ ಕೃತಿ ಇದು. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಬೂದಿಹಾಳ ಗ್ರಾಮವು ಮುಳುಗಡೆಯಾಯಿತು. ಈ ಸಂದರ್ಭದಲ್ಲಿ, ಬೂದಿಹಾಳದ ಶ್ರೀ ಫಕೀರೇಶ್ವರ ಮಠವೂ ಮುಳುಗಡೆಯಾದರಿಂದ ಬೂದಿಹಾಳ ಪುನರ್ ವಸತಿ ಕೇಂದ್ರದಲ್ಲಿ ಹೊಸ ಮಠವನ್ನು ನಿರ್ಮಿಸಲಾಯಿತು. ಮುಂಚಿನ ಶ್ರೀ ಫಕೀರೇಶ್ವರ ಮಠದ ವಾಸ್ತು, ಆಚರಣೆ, ಸಂಪ್ರದಾಯಗಳು ದಾಖಲೆಗೊಳ್ಳಬೇಕೆಂಬ ಉದ್ದೇಶದ ಹಿನ್ನೆಲೆಯಲ್ಲಿ ಈ ಗ್ರಂಥ ಬರೆಯಲ್ಪಟ್ಟಿದೆ.
©2024 Book Brahma Private Limited.