ಕಥೆಗಳ ರೂಪದಲ್ಲಿ ನೀತಿ ಬೋಧನೆಯನ್ನು, ರಾಜಧರ್ಮವನ್ನು ಮತ್ತು ಪ್ರಜಾಧರ್ಮವನ್ನು ಬೋಧಿಸುವ ಪಂಚತಂತ್ರಗಳು ವಿವಿಧ ಕಾಲಘಟ್ಟದಲ್ಲಿ ಬೇರೆ ಬೇರೆ ಲೇಖಕರಿಂದ ರಚನೆಗೊಂಡಿತು. ಆದರೆ ಅವುಗಳಲ್ಲೆಲ್ಲ ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾದ ದುರ್ಗಸಿಂಹ ಪಂಚತಂತ್ರ ಕಥೆಗಳು ವಸುಭಾಗ ಪಂಚತಂತ್ರದ ಕತೆಗಳ ಕನ್ನಡ ಛಾಯೆಯಂತೆ ಗೋಚರವಾಗುತ್ತದೆ. ಈ ಕೃತಿಯೂ ದಕ್ಷಿಣ ಭಾರತದಲ್ಲಿ ಮಹತ್ವಪೂರ್ಣವಾಗಿ ಮೂಡಿಬರುವುದರ ಜೊತೆಗೆ ಪ್ರಸಿದ್ಧಿಯನ್ನು ಪಡೆದಿದೆ. ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ 90 ಪಂಚತಂತ್ರದ ಪರಿಷ್ಕರಣಗಳಿವೆ ಎಂದು ಅಂದಾಜಿಸಲಾಗಿದೆ. ದುರ್ಗಸಿಂಹನ ಪಂಚತಂತ್ರ ಕಥೆಗಳ ಮೂಲಕೃತಿಯನ್ನು ಆಧರಿಸಿ ಡಾ. ಪಿ.ವಿ. ನಾರಾಯಣರು ಈ ಅಪೂರ್ವವಾಗಿ ಈ ಕೃತಿಯನ್ನು ರಚಿಸಿದ್ದಾರೆ.
©2024 Book Brahma Private Limited.