ಇರುವುದು ಮೂರೇ ಕತೆಗಳಾದರೂ ಪ್ರತಿಯೊಂದೂ ವಿಭಿನ್ನ ಅನುಭವ ಲೋಕವನ್ನು ಕಟ್ಟಿಕೊಡುವ ಕಾರಣಕ್ಕಾಗಿ ಓದುಗರ ಗಮನ ಸೆಳೆದ ಕೃತಿ ’ಗುಡಿವಾಡ ಮತ್ತು ಎರಡು ಕಥೆಗಳು’.
ಊರೊಂದು ನಿಗೂಢವಾಗಿ ಆವರಿಸಿಕೊಳ್ಳುವ ಸಂಗತಿ ಗುಡಿವಾಡದ ಕಥಾವಸ್ತು. ಕಾಡು, ಊರಿಗೆ ಅಂಟಿಕೊಂಡ ಒಂದು ದಂತಕತೆ ನಿರೂಪಣೆಯನ್ನು ವಿಸ್ತರಿಸುತ್ತ ಹೋಗಿವೆ. ತೊರೆ ಮತ್ತು ತೆರೆ ಕೂಡ ಅಂತಹುದೇ ಶಕ್ತಿಶಾಲಿ ನಿರೂಪಣೆ ಹೊಂದಿವೆ. ಮೂರೂ ಕತೆಗಳಲ್ಲಿ ಬರುವ ಪಾತ್ರಗಳಾದ ಸುಧಾಮ, ಯದು, ಅಹಲ್ಯಾ ತಮ್ಮ ಗಟ್ಟಿತನದಿಂದ ಓದುಗರನ್ನು ಸೆಳೆಯುತ್ತವೆ.
©2025 Book Brahma Private Limited.