ಮೆಕ್ಸಿಕೋ ನಾಡಿನ ಮೂಲವಾಸಿಗಳ ಹೋರಾಟವನ್ನು ಪ್ರತಿನಿಧಿಸುವ ಜಪತಿಸ್ತ ಎಂಬ ಹೆಸರಿನ ಚಳವಳಿಯಲ್ಲಿ Asking, We walk ಎಂಬುದು ಧ್ಯೇಯವಾಕ್ಯ ವಾಗಿ ಬಳಸಲಾಗಿದೆ. ಹೋರಾಟದ ಗುರಿ ಮತ್ತು ದಾರಿಗಳೆರಡನ್ನೂ ಹೇಳುವ ವಾಕ್ಯವಿದು. ಮೂಲ ಕೃತಿ ಸಂಪುಟದಿಂದ ಕೆಲವು ಬರಹಗಳನ್ನು ಈಗ ಕನ್ನಡಕ್ಕೆ ಅನುವಾದಿಸಲಾಗಿದೆ.. Asking, We walk : South as new political Imaginary ಎಂಬುದು ನಾಲ್ಕು ಸಂಪುಟಗಳಲ್ಲಿರುವ ಒಂದು ಪುಸ್ತಕ. ಡಾ. ಕಾರಿನ್ ಕುಮಾರ್ ಅವರು ಈ ಕೃತಿ ಸರಣಿಯ ಮುಖ್ಯ ಸಂಪಾದಕರು. ಇವರೊಡನೆ ಜಾಗತಿಕ ನೆಲೆಯ ಹಲವು ಚಿಂತಕ – ಹೋರಾಟಗಾರರು ಈ ಕೃತಿಯ ಸಂಪಾದನಾ ಕಾರ್ಯವನ್ನು ಮಾಡಿದ್ಧಾರೆ.
ಲೋಕ ವ್ಯವಹಾರವನ್ನು ಬಣ್ಣಿಸುವವರು ಪೂರ್ವ-ಪಶ್ಚಿಮ ಎಂಬ ನೆಲೆಗಳನ್ನು ಬಳಸುವಂತೆ ಉತ್ತರ- ದಕ್ಷಿಣ ಎಂಬ ನೆಲೆಗಳನ್ನು ಬಳಸುತ್ತಾರೆ. ಉತ್ತರದ ಲೋಕ ವ್ಯವಹಾರಗಳನ್ನು ಹಲವು ಬಗೆಯಲ್ಲಿ ಪ್ರಶ್ನಿಸುತ್ತಾ ಅದನ್ನು ಎದುರಿಸುತ್ತ, ನಡೆದಿರುವ ದಕ್ಷಿಣ ಲೋಕದ ಹೋರಾಟಗಳು ಮತ್ತು ಅವುಗಳ ಹಿಂದಿರುವ ಪ್ರೇರಣೆಗಳನ್ನು ದಾಖಲಿಸುವುದು ’ಕೇಳುತ್ತ ನಡೆಯೋಣ’ ಕೃತಿಯಲ್ಲಿನ ಬರಹಗಳ ಮುಖ್ಯ ಉದ್ದೇಶವಾಗಿದೆ.
©2024 Book Brahma Private Limited.