‘ಬೆಸ್ತರರ ರಾಣಿ ಚಂಪಕ’ ಕೆ. ಅರುಣ್ ಪ್ರಸಾದ್ ಅವರ ಐತಿಹಾಸಿಕ ಕೃತಿಯಾಗಿದೆ. ಕೆಳದಿಯ ಖ್ಯಾತ ರಾಜಾ ವೆಂಕಟಪ್ಪ ನಾಯಕ ಮತ್ತು ಚಂಪಕಾರಾಣಿ ದುರಂತ ಪ್ರೇಮ ಕಥೆಯಾಗಿರುವ ಈ ಕಾದಂಬರಿಯನ್ನು ಇತಿಹಾಸದಲ್ಲಿ ಪುಟದಲ್ಲಿ ದಾಖಲಾದ ಮಾಹಿತಿಗಳಿಗೆ ಪೂರಕವಾಗಿ ಮತ್ತು ಜನಪದದಲ್ಲಿನ ಚಂಪಕಾಳ ಕಥೆಗೆ ಅನುಗುಣವಾಗಿ ಬರೆಯಲಾಗಿದೆ ಎಂದು ಲೇಖಕರು ಹೇಳಿಕೊಂಡಿದ್ದಾರೆ. ಇದರಲ್ಲಿ ಒಟ್ಟು ಐವತ್ತೆಂಟು ಅಧ್ಯಾಯಗಳಿವೆ. ರಾಜಾ ವೆಂಕಟಪ್ಪ ನಾಯಕರ ಪ್ರತಿನಿತ್ಯದ ದಿನಚರಿ, ಆನಂದ ಪುರದಿಂದ ಕವಲೇ ದುರ್ಗಕ್ಕೆ ಹೋಗುವ ಮಾರ್ಗದ ಪ್ರಾಕೃತಿಕ ಸೊಬಗು, ಗುತ್ಯಮ್ಮನ ದೇವಾಲಯ, ಗಂಗಾ ಮಠ…ಇವೆಲ್ಲವುಗಳ ವರ್ಣನೆಯೊಂದಿಗೆ ಪ್ರಾರಂಭವಾಗುವ ಈ ಕಾದಂಬರಿಯಲ್ಲಿ ಪೋರ್ಚುಗೀಸರು, ಕಾಳುಮೆಣಸಿನ ವ್ಯಾಪಾರ, ವಹಿವಾಟುಗಳ ಮಾಹಿತಿಯೂ ಇದೆ..
©2025 Book Brahma Private Limited.