ಜಿತ್ವರೀ : ಇದು ಕಾಶಿ ಸದ್ಯೋಜಾತ ಭಟ್ಟರ ಕೃತಿಯಾಗಿದೆ. ಸೆಪ್ಟೆಂಬರ್ 2, 1669 ರಂದು ಕಾಶಿಯ ವಿಶ್ವನಾಥನ ದೇವಾಲಯವನ್ನು ಕೆಡವಿದರು ಎಂಬ ಸುದ್ದಿಯನ್ನು ಔರಂಗಾಜೇಬ್ ಪಡೆದ. ಕೇವಲ ದೇವಾಲಯವನ್ನು ಕೆಡವಿದ್ದು ಮಾತ್ರವಲ್ಲ ಜ್ಞಾನವಾಪಿ ಮಸೀದಿಯನ್ನು ಸಹ ಅಲ್ಲಿಯೇ ನಿರ್ಮಿಸಲಾಯಿತು. ಮಸೀದಿಯ ನಿರ್ಮಾಣ ಮಾಡಿದವರು ಹಳೆಯ ದೇವಾಲಯದ ಪಶ್ಚಿಮ ಗೋಡೆಯನ್ನು ಕೆಡವಿದರು. ಕೆಲವು ಚಿಕ್ಕ ಮಂದಿರಗಳನ್ನೂ ಕೆಡವಿದರು. ಪಶ್ಚಿಮ, ಉತ್ತರ ಮತ್ತು ದಕ್ಷಿಣ ದ್ವಾರಗಳನ್ನು ಸಹ ಮುಚ್ಚಲಾಯಿತು, ದ್ವಾರಗಳ ಮೇಲಿನ ಶಿಖರಗಳನ್ನು ನಾಶಗೊಳಿಸಲಾಯಿತು. ಅವುಗಳ ಸ್ಥಳದಲ್ಲಿ ಗುಮ್ಮಟಗಳನ್ನು ನಿರ್ಮಿಸಲಾಯಿತು. ವಿಶ್ವನಾಥನ ಗರ್ಭಗುಡಿಯು ಮಸೀದಿಯ ಮುಖ್ಯ ಸಭಾಂಗಣವಾಯಿತು. ನಾಲ್ಕು ಅಂತರ್‌ಗೃಹಗಳನ್ನು ಉಳಿಸಿದರು. ದೇವಾಲಯದ ಪೂರ್ವ ಭಾಗವನ್ನು ಕೆಡವಿ ಅದನ್ನು ಜಗುಲಿಯಾಗಿ ಪರಿವರ್ತಿಸಿದರು ಎಂದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಲಾಗಿದೆ.
©2024 Book Brahma Private Limited.